Saturday, November 14, 2026

Dasara Wishes

ಐದು ತಿಂಗಳಲ್ಲೇ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ಸಿಎಂ ಸಿದ್ದರಾಮಯ್ಯಗೆ ಖು...
Happy Dasara
Home Front Page ಪರಿಸರ ಸೂಚ್ಯಂಕ: ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಭಾರತದ ಸಾಧನೆ ಕಳಪೆ.

ಪರಿಸರ ಸೂಚ್ಯಂಕ: ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಭಾರತದ ಸಾಧನೆ ಕಳಪೆ.

India-bad-achievement-in-environment-ranking

 

ನವದೆಹಲಿ (ಪಿಟಿಐ): ಈ ಸಾಲಿನ ಪರಿಸರ ಕಾರ್ಯದಕ್ಷತೆ ಸೂಚ್ಯಂಕದಲ್ಲಿ (ಇಪಿಐ) ಭಾರತ ಅತ್ಯಂತ ಕಡಿಮೆ ಅಂಕ ಪಡೆದು, ಕೊನೆಯ ಸ್ಥಾನದಲ್ಲಿದೆ ಎಂದು ಅಮೆರಿಕದ ಅಧ್ಯಯನ ಸಂಸ್ಥೆಗಳು ಹೇಳಿದೆ. ಅತಿಹೆಚ್ಚು ಅಂಕ ಪಡೆದಿರುವ ಡೆನ್ಮಾರ್ಕ್ ಮೊದಲ ಸ್ಥಾನದಲ್ಲಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಪರಿಸರ ಕಾನೂನು ಮತ್ತು ನೀತಿ ಅಧ್ಯಯನ ಕೇಂದ್ರ ಮತ್ತು ಭೂವಿಜ್ಞಾನ ಮಾಹಿತಿ ಜಾಲ ಕೇಂದ್ರ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ಸೂಚ್ಯಂಕ ನೀಡಲಾಗಿದೆ. ಒಟ್ಟು 180 ದೇಶಗಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಪ್ರತಿ ದೇಶಗಳ ಸುಸ್ಥಿರ ಅಭಿವೃದ್ಧಿ ಮಾದರಿ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆ ನಿಯಂತ್ರಣ ಕ್ರಮ ಪರಿಶೀಲಿಸಿ ಈ ಸೂಚ್ಯಂಕ ಸಿದ್ಧಪಡಿಸಲಾಗಿದೆ.

ಒಟ್ಟು ಅಂಕಗಳಲ್ಲಿ 18.9 ಅಂಕಗಳನ್ನು ಪಡೆದ ಭಾರತವು 180ನೇ ಸ್ಥಾನದಲ್ಲಿದೆ. ‘ಭಾರತವು ಮಾಲಿನ್ಯ ನಿಯಂತ್ರಣಕ್ಕಿಂತ, ಆರ್ಥಿಕ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಹೀಗಾಗಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದಿದೆ’ ಎಂದು ಸೂಚ್ಯಂಕ ವರದಿಯಲ್ಲಿ ವಿವರಿಸಲಾಗಿದೆ.

20.1 ಅಂಕ ಪಡೆದಿರುವ ವಿಯೆಟ್ನಾಂ, 23.1 ಅಂಕ ಪಡೆದಿರುವ ಬಾಂಗ್ಲಾದೇಶ 24.6 ಅಂಕ ಪಡೆದಿರುವ ಪಾಕಿಸ್ತಾನವು ಕ್ರಮವಾಗಿ 179, 178 ಮತ್ತು 177ನೇ ಸ್ಥಾನ ಪಡೆದಿವೆ. 28.4 ಅಂಕ ಪಡೆದಿರುವ ಚೀನಾ 161ನೇ ಸ್ಥಾನ, ರಷ್ಯಾ 112ನೇ ಸ್ಥಾನ, ಅಮೆರಿಕ 20 ನೇ ಸ್ಥಾನದಲ್ಲಿದೆ.

key words : India-bad-achievement-in-environment-ranking

ಕೃಪೆ : ಪ್ರಜಾವಾಣಿ