Wednesday, August 12, 2026

BDA Apartments

Home Front Page ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು: ವಿಜಯೇಂದ್ರ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಮಾಜಿ ಸಿಎಂ ಬಿಎಸ್ ವೈ.

ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು: ವಿಜಯೇಂದ್ರ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಮಾಜಿ ಸಿಎಂ ಬಿಎಸ್ ವೈ.

ವಿಜಯಪುರ,ಜೂನ್,8,2022(www.justkannada.in): ಬಿಜೆಪಿಯಲ್ಲಿ ಬಿಎಸ್ ವೈ ಸೈಡ್ ಲೈನ್ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಈ ಕುರಿತು ಮಾತನಾಡಿರುವ ಬಿಎಸ್ ಯಡಿಯೂರಪ್ಪ, ಸಿದ್ದರಾಮಯ್ಯನಿಂದ  ನನಗೆ ಸರ್ಟಿಫಿಕೇಟ್ ಬೇಕಾಗಿಲ್ಲ. ಬಿಜೆಪಿಯಲ್ಲಿ ನನಗೆ ಉತ್ತಮ ಸ್ಥಾನ  ಸಿಕ್ಕಿದೆ. 4 ಬಾರಿ ನಾನು ಸಿಎಂ ಆಗಿದ್ದೆ. ಬಿಜೆಪಿ ಎಲ್ಲವನ್ನ ಕೊಟ್ಟಿದೆ.  ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ.  ಆರೋಗ್ಯ ಚೆನ್ನಾಗಿದ್ರೆ 10 ವರ್ಷ ಓಡಾಡುತ್ತೇನೆ. ರಾಜ್ಯದಲ್ಲೆಲ್ಲಾ ಪ್ರವಸ ಮಾಡಿ ಪಕ್ಷ ಕಟ್ಟುತ್ತೇನೆ. ಸಿದ್ದು ಅಧಿಕಾರಕ್ಕೆ ಬರುವ ಬ್ರಮೆಯಲ್ಲಿದ್ದಾರೆ ಎಂದರು.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ಎಲ್ಲೇ ನಿಂತರೂ ಗೆದ್ದು ಬರ್ತಾರೆ. ವಿಜಯೇಂದ್ರಗೆ ಮುಂದೆ ಒಳ್ಳೆ ಭವಿಷ್ಯ ಇದೆ. ವಿಜಯೇಂದ್ರ ಯುವಕ, ಒಳ್ಳೆಯ ಅವಕಾಶ ಸಿಗಲಿದೆ. ಯುವಕರಲ್ಲಿ ವಿಜಯೇಂದ್ರ ಬಗ್ಗೆ ವಿಶ್ವಾಸವಿದೆ ಎಂದು ತಿಳಿಸಿದರು.

Key words: Siddaramaiah- statement-former CM-BS Yeddyurappa