ಕೊರೋನಾ ಹೆಚ್ಚಳ : ಅಧಿಕಾರಿಗಳ ಜತೆ ಸಚಿವ ಎಸ್.ಟಿ ಸೋಮಶೇಖರ್  ಜಿಲ್ಲಾ ಮಟ್ಟದ ಸಭೆ….

ಮೈಸೂರು,ಆ,15,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ  ಅಧಿಕಾರಿಗಳ ಜತೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಕೊರೋನಾ ಪರಿಸ್ಥಿತಿ ಕುರಿತು ಮಾಹಿತಿ ಪಡೆದರು.jk-logo-justkannada-logo

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕೊರೋನಾ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಚಿವ ಎಸ್ ಟಿ ಸೋಮಶೇಖರ್ ಚರ್ಚಿಸಿ ಕೊರೋನಾ ಸ್ಥಿತಿಗತಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.Increasing- corona-Mysore- Minister -ST Somashekhar

ಸಭೆಯಲ್ಲಿ ವಿಧಾನಸಭಾ ಕ್ಷೇತ್ರಗಳ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಭಾಗಿಯಾಗಿದ್ದರು. ಶಾಸಕರಾದ ಜಿ.ಟಿ ದೇವೇಗೌಡ,  ತನ್ವೀರ್ ಸೇಠ್, ಅಶ್ವಿನ್ ಕುಮಾರ್, ಎಂಎಲ್ ಸಿ ಧರ್ಮಸೇನಾ ಸಭೆಯಲ್ಲಿ ಉಪಸ್ಥಿತಿರಿದ್ದರು.

Key words: Increasing- corona-Mysore- Minister -ST Somashekhar