ಮಹಿಳಾ ಕೃಷಿ ಕಾರ್ಮಿಕರ ಸಹಾಯಧನ 1000 ರೂ.ಗೆ ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ.

ಬೆಂಗಳೂರು,ಫೆಬ್ರವರಿ,23,2023(www.justkannada.in):  ಮಹಿಳಾ ಕೃಷಿ ಕಾರ್ಮಿಕರಿಗೆ ಬಜೆಟ್ ನಲ್ಲಿ 500 ರೂ. ಸಹಾಯಧನ ಘೋಷಣೆ ಮಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಈಗ ಸಹಾಯಧನವನ್ನ  1000ರೂ.ಗೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಭೂರಹಿತ ದುಡಿಯುವ ಮಹಿಳಾ ಕೃಷಿಕಾರ್ಮಿಕರಿಗೆ 1000 ರೂ ನೀಡುತ್ತೇವೆ ಎಂದಿದ್ದಾರೆ.

ಬಜೆಟ್ ಅಂದರೇ ರಾಜ್ಯದ ಹಣಕಾಸಿನ ಸ್ಥಿತಿ. ಜನರ ಆಶೋತ್ತರ ಈಡೇರಿಸುವ ಗುರಿಯಾಗಿರುತ್ತದೆ. ರಾಜ್ಯದ ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೇ ಅಭಿವೃದ್ದಿ ಕುಂಠಿತವಾಗಲ್ಲ.  ಬಜೆಟ್ ನಿಂದ ಜನಕಲ್ಯಾಣವೂ ಆಗಬೇಕು. ಆಗ ಮಾತ್ರ ಬಜೆಟ್ ಗೆ ಒಂದು ಅರ್ಥ ಬರುತ್ತದೆ. ಬಜೆಟ್ ರಾಜ್ಯದ ಅಭಿವೃದ್ದಿಗೆ ಸಹಕರಿಸುತ್ತೆ. 2023-24ರಲ್ಲಿ ಉತ್ತಮ ಬಜೆಟ್ ಮಂಡಿಸುತ್ತೇವೆ. ರೆವಿನ್ಯೂ ಸರ್ ಪ್ಲಸ್ ಬಜೆಟ್ ಮಂಡಿಸುತ್ತೇವೆ. ಜನರಿಂದ ಆಗಿರುವ ವ್ಯವಹಾರದಿಂದ ಆರ್ಥಿಕ ಅಭಿವೃದ್ದಿಯಾಗಿದೆ ಎಂದರು.

ಕೊರೋನಾ ವರ್ಷ ಕೊರೋನಾ ನಂತರ ಆರ್ಥಿಕ ಚಟುವಟಿಕೆ ಚೇತರಿಕೆ ಕಂಡಿದೆ. ಜನರ ಶ್ರಮ ರಾಜ್ಯದ ಒಟ್ಟಾರೇ ವಾತಾವರಣ ಉತ್ತಮವಾಗಿದೆ. ಎಲ್ಲಾ ಚಟುವಟಿಕೆ ಉತ್ತಮವಾಗಿದೆ. ನಮ್ಮ   ರಾಜ್ಯದ ಆರ್ಥಿಕತೆ ಶ. 14ರಷ್ಟು ಹೆ್ಚಳವಾಗಿದೆ. 2023-24ಕ್ಕೆ. ಆರ್ಥಿಕ ನಿರ್ವಹಣೆ, ಬಜೆಟ್ ನಲ್ಲಿ ಶಿಸ್ತು ಕಾಪಡಲಾಗಿದೆ. ಅಭಿವೃದ್ದಿಗೆ ಯಾವುದೇ ತೊಂದರೆಯಾಗಲ್ಲ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Key words: Increase – subsidy – women –agricultural- workers – Rs 1000- CM -Basavaraja Bommai