Monday, September 21, 2026

BDA Apartments

ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಸರ್ಕಾರ ಆ...
Home Front Page ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ.

ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳಿಗೆ ವಿಶೇಷ ಆಹಾರ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ.

ಬೆಂಗಳೂರು, ಫೆಬ್ರವರಿ,4,2022(www.justkannada.in):  ನಕ್ಸಲ್ ನಿಗ್ರಹ ದಳ (ಎ ಎನ್ ಎಫ್) ಯೋಧರು ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಪ್ರಶಿಕ್ಷಣಾರ್ಥಿಗಳಾಗಿ, ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ, ನೀಡಲಾಗುತ್ತಿರುವ ವಿಶೇಷ ಆಹಾರ ಭತ್ಯೆ ದರವನ್ನು, ರೂಪಾಯಿ 130 ರಿಂದ 300 ರೂ.ಗಳಿಗೆ ಹೆಚ್ಚಿಸಿ ಸರಕಾರ ಆದೇಶ ಹೊರಡಿಸಿದೆ.

ಈ ಸಂಬಂಧ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಆಂತರಿಕ ಭದ್ರತಾ ವಿಭಾಗ, ಸರಕಾರಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಪುರಸ್ಕರಿಸಿ, ಸರಕಾರವು, ವಿಶೇಷ ಆಹಾರ ಭತ್ಯೆಯನ್ನು ಪರಿಷ್ಕರಿಸಿದೆ.ministers-Important- meeting – Corona- control-bangalore

ವಿಶೇಷ ಆಹಾರ ಹೆಚ್ಚುವರಿ ಭತ್ಯೆ,  ಎ ಎನ್  ಎಫ್ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ, ಸಿಸಿಟಿ ಮತ್ತು ಗರುಡ ಪಡೆಯ ಯೋಧರಿಗೂ ಅನ್ವಯವಾಗುವಂತೆ ಆದೇಶ ಹೊರಡಿಸಲಾಗಿದೆ.

ಸರಕಾರ ಹೊರಡಿಸಿರುವ ಭತ್ಯೆ ಹೆಚ್ಚಳ ಆದೇಶ, ನಿಮ್ಹಾನ್ಸ್ ಆಸ್ಪತ್ರೆ ಆಹಾರ ತಜ್ಞರು ನಿಗದಿಪಡಿಸಿರುವ ೫೬೦೦ kcal ನೀಡುವ ಪೌಷ್ಟಿಕ ಆಹಾರವನ್ನು,  ಭದ್ರತಾ ಪಡೆಗಳಿಗೆ ಒದಗಿಸಲು ಸಹಾಯಕವಾಗುತ್ತದೆ.

Key words: increase- special -food -allowance – Naxalites