Sunday, October 18, 2026

Dasara Wishes

Happy Dasara
Home Front Page “ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

“ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ” : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಬೆಂಗಳೂರು,ಜನವರಿ,01,2021(www.justkannada.in) : ಕೊರೋನಾದಿಂದ ಕಂಗೆಟ್ಟಿದ್ದ ಆರ್ಥಿಕ ವ್ಯವಸ್ಥೆಯನ್ನು ಮೇಲೆತ್ತುವುದಕ್ಕಾಗಿ 2021ರ ಬಜೆಟ್ ನಲ್ಲಿ ಸೆಸ್, ತೆರಿಗೆ ಹೆಚ್ಚಿಸಲಾಗುತ್ತದೆ ಎಂಬ ಆತಂಕ ದೂರಾಗಿದೆ. ಆದಾಯ ತೆರಿಗೆ ವಿನಾಯಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.jk

ಆದಾಯ ತೆರಿಗೆ ಯಥಾ ಸ್ಥಿತಿಯಲ್ಲೇ ಮುಂದುವರೆಯಲಿದೆ. 75 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು, ಪಿಂಚಣಿಯಿಂದ ಬರುವ ಆದಾಯ, ಠೇವಣಿ ಮೇಲಿನ ಬಡ್ಡಿಗೆ. ಐಟಿ ರಿಟರ್ನ್ಸ್ ಸಲ್ಲಿಸುವುದರಿಂದ ವಿನಾಯಿತಿ ನೀಡಲಾಗಿದೆ ಎಂದರು.

ಇದರಿಂದ ಒಂದು ಪಿಂಚಣಿ ಹಾಗೂ ಒಂದೇ ಬಡ್ಡಿಯ ಯೋಜನೆ ಹೊಂದಿರುವ 75 ವರ್ಷಗಳ ಹಿರಿಯ ನಾಗರಿಕರಿಗೆ ಮಾತ್ರ. ಈ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿನಾಯಿತಿ ಅನ್ವಯವಾಗಲಿದೆ.Income-Tax-exception-Any-no change-Minister- Finance-Nirmala Sitharaman

ಕೃಪೆ : internetಬಹುಮೂಲಗಳಿಂದ ಆದಾಯ ಹಾಗೂ ಬಡ್ಡಿಯ ಯೋಜನೆ ಹೊಂದಿರುವ ಹಿರಿಯ ನಾಗರಿಕರಿಗೆ ಇದು ಅನ್ವಯವಾಗುವುದಿಲ್ಲ. ಕೊರೋನಾ ಸೆಸ್ ವಿಧಿಸಲಾಗುತ್ತದೆ ಎಂಬ ಆತಂಕವೂ ಸಹ ದೂರಾಗಿದ್ದು, ಕೊರೋನಾ ಸೆಸ್ ನ್ನು ಕೇಂದ್ರ ಸರ್ಕಾರ ವಿಧಿಸಿಲ್ಲ ಎಂದು ತಿಳಿಸಲಾಗಿದೆ.

key words : Income-Tax-exception-Any-no change-Minister- Finance-Nirmala Sitharaman