Saturday, September 19, 2026

BDA Apartments

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳ ಬಂಧನ…! BDA JK_Adv BDA Adv
Home Crime ಅಕ್ರಮ ಮದ್ಯ ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳ ಬಂಧನ…!

ಅಕ್ರಮ ಮದ್ಯ ಮಾರಾಟಕ್ಕೆ ಯತ್ನ : ಇಬ್ಬರು ಆರೋಪಿಗಳ ಬಂಧನ…!

ಬೆಂಗಳೂರು,ಡಿಸೆಂಬರ್,30,2020(www.justkannada.in) : ನ್ಯೂ ಇಯರ್ ಸೆಲೆಬ್ರೆಷನ್ ಕಿಕ್ಕೇರಿಸಲು ಅಕ್ರಮ ಮದ್ಯ ಮಾರಾಟಕ್ಕೆ ಯತ್ನಿಸಿದವರನ್ನು ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ಅಂಡ್ ಟೀಂನ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬಂಧಿಸಲಾಗಿದೆ.

ಮಣಿ ಮತ್ತು ರಾಮು ಬಂಧಿತ ಆರೋಪಿಗಳಾಗಿದ್ದು, ಈ ಇಬ್ಬರು ಸರ್ಕಾರಕ್ಕೆ ತೆರಿಗೆ ವಂಚಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ. 12 ಲಕ್ಷ ಮೌಲ್ಯದ 110 ಬಾಟೆಲ್ ಕಾಸ್ಟ್ಲಿ ಡ್ರಿಂಕ್ಸ್ ಗಳನ್ನು ಮಿಲ್ಟ್ರಿ ಕ್ಯಾಂಟಿನ್ ಹಾಗೂ ಡ್ಯೂಟಿ ಫ್ರೀ ಶಾಪ್ ಗಳಿಂದ ಖರೀದಿ ಮಾಡಿದ್ದ ಗ್ಯಾಂಗ್, ಸರ್ಕಾರಕ್ಕೆ ಟ್ಯಾಕ್ಸ್ ವಂಚಿಸಿ ಹೊಸ ವರ್ಷಕ್ಕೆ ಸಪ್ಲೈ ಮಾಡಲು ಸಂಚು ರೂಪಿಸಿದ್ದರು.

ಮಿಲ್ಟ್ರಿ ಕ್ಯಾಂಟಿನ್ ನಲ್ಲಿ ಬೇರೆಯವರ ಕಾರ್ಡ್ ಬಳಸಿ ಮದ್ಯ ಖರೀದಿಸಿದ ಕಿರಾತಕರ ತಂಡ ಬಳಿಕ ಪಾರ್ಟಿಗಳಿಗೆ ಬಾರ್ ರೇಟ್ ಗಿಂತ ಕಡಿಮೆ ರೇಟ್ ಗೆ ಡ್ರಿಂಕ್ಸ್ ಮಾರಾಟಕ್ಕೆ ಯತ್ನ ನಡೆಸಿದ್ದರು.Illegal,Alcohol,Attempts,Arrest,two,accused

ವಿಚಾರ ತಿಳಿದ ಅಬಕಾರಿ ಇಲಾಖೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮ ಮಾರಾಟ ಜಾಲದಲ್ಲಿ ಮತ್ತಷ್ಟು ಆರೋಪಿಗಳ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

key words : Illegal-Alcohol-Attempts-Arrest-two-accused …!