‘ಮೈ ಅಟೋಗ್ರಾಫ್’ ನೆನಪು ಮೆಲುಕು ಹಾಕಿದ ಕಿಚ್ಚ

ಬೆಂಗಳೂರು,ಡಿಸೆಂಬರ್,30,2020(www.justkannada.in): ಮೈ ಅಟೋಗ್ರಾಫ್ (My Autograph) ಸಿನಿಮಾ ಶೂಟಿಂಗ್ ನಡೆದ ಮನೆಗೆ ನಟ ಕಿಚ್ಚ ಸುದೀಪ್ ಭೇಟಿ ನೀಡಿದ್ದಾರೆ.

ಬರೋಬ್ಬರಿ 15 ವರ್ಷಗಳ ಬಳಿಕ ಕೇರಳದ ಈ ಮನೆಗೆ ಭೇಟಿ ನೀಡಿದ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

2006ರಲ್ಲಿ ಬಿಡುಗಡೆಯಾದ ಮೈ ಅಟೋಗ್ರಾಫ್ ಚಿತ್ರ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಒಂದು ದೊಡ್ಡ ಮನೆಯನ್ನು ಚಿತ್ರದಲ್ಲಿನ ಸುದೀಪ್ (Sudeep) ಪ್ರೇಯಸಿ ಲತಿಕಾ ಮನೆ ಎಂದು ತೋರಿಸಲಾಗಿತ್ತು.

ಬರೋಬ್ಬರಿ 15 ವರ್ಷಗಳ ಬಳಿಕ ಇಲ್ಲಿಗೆ ಭೇಟಿ ನೀಡಿದ ಅವರು ವಿಡಿಯೋ ಮೂಲಕ ತಮ್ಮ ಭಾವನೆ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ.