Saturday, September 19, 2026

BDA Apartments

ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ‘ರಂಗನಾಯಕ’ ಮುಹೂರ್ತ BDA JK_Adv BDA Adv
Home Cinema ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ‘ರಂಗನಾಯಕ’ ಮುಹೂರ್ತ

ಗುರುಪ್ರಸಾದ್-ಜಗ್ಗೇಶ್ ಕಾಂಬಿನೇಷನ್ ‘ರಂಗನಾಯಕ’ ಮುಹೂರ್ತ

ಬೆಂಗಳೂರು,ಡಿಸೆಂಬರ್,30,2020(www.justkannada.in): ಗುರುಪ್ರಸಾದ್ ಹಾಗೂ ‘ನವರಸನಾಯಕ’ ಜಗ್ಗೇಶ್ ಒಟ್ಟಿಗೆ ಕಮ್ ಬ್ಯಾಕ್ ಮಾಡುತ್ತಿರುವ ಚಿತ್ರ ‘ರಂಗನಾಯಕ’ ಚಿತ್ರದ ಮುಹೂರ್ತ ನಡೆದಿದೆ.

ಚಿತ್ರದ ಮುಹೂರ್ತ ಕಾರ್ಯಕ್ರಮ ಸೋಮವಾರ ಬೆಂಗಳೂರಿನ ಬುಲ್‍ಟೆಂಪಲ್ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದಿದೆ.

ಚಿತ್ರದ ಪ್ರಥಮ ದೃಶ್ಯಕ್ಕೆ ನಿರ್ಮಾಪಕ ದೇವೇಂದ್ರ ರೆಡ್ಡಿ ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು.

‘ಪುಷ್ಪಕವಿಮಾನ’, ‘ಇನ್‍ಸ್ಪೆಕ್ಟರ್ ವಿಕ್ರಂ’ ಚಿತ್ರಗಳ ನಂತರ ವಿಖ್ಯಾತ್ ನಿರ್ಮಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.