ಕಿರುತೆರೆಗೆ ಸುಧಾರಾಣಿ ಎಂಟ್ರಿ !

ಬೆಂಗಳೂರು,ಡಿಸೆಂಬರ್,30,2020(www.justkannada.in): ಖ್ಯಾತ ನಟಿ ಸುಧಾರಾಣಿ ಕಿರುತೆರೆಗೆ ಕಾಲಿಟ್ಟಿದ್ದಾರೆ!

ಹೌದು. ನಟಿ ಸುಧಾರಾಣಿ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಇವರೊಂದಿಗೆ ನಟ ವಿಜಯ್ ಸೂರ್ಯ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

ಜೀ ಕನ್ನಡದ ‘ಜೊತೆ ಜೊತೆಯಲಿ’ ಧಾರವಾಹಿಯಲ್ಲಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ವಿಶಿಷ್ಟ ಕಥೆಯುಳ್ಳ ಈ ಧಾರಾವಾಹಿ ಮೊದಲ ಕಂತಿನಿಂದಲೇ ವೀಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆದಿತ್ತು.

ಸದ್ಯ ‘ಜೊತೆ ಜೊತೆಯಲಿ’ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ.