ಅಕ್ರಮ ರೆಸಾರ್ಟ್ ಗಳ ವಿರುದ್ಧ ದನಿ ಎತ್ತಿದ್ದಕ್ಕೆ ಸಸ್ಪೆಂಡ್: ವಕೀಲ ವಿ.ರವಿಕುಮಾರ್ ಬೇಸರ

ಮೈಸೂರು,ಜನವರಿ,7,2026 (www.justkannada.in): ಅಕ್ರಮ ರೆಸಾರ್ಟ್ ಗಳ ವಿರುದ್ಧ ದನಿ ಎತ್ತಿದ್ದೇ ತಪ್ಪಾ? ಕಾಡು ಉಳಿಸಿ ಅಂತ ಹೋರಾಟ ಮಾಡಿದ್ದಕ್ಕೆ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ ಎಂದು ಮೈಸೂರಲ್ಲಿ ವಕೀಲ ವಿ.ರವಿಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲೆ‌ ಹೆಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರಿನಲ್ಲಿ ಅಕ್ರಮ ರೆಸಾರ್ಟ್ ಗಳು ನಡೆಯುತ್ತಿರುವ ಆರೋಪ ಕೇಳಿ ಬಂದಿತ್ತು. ಅಕ್ರಮ ರೆಸಾರ್ಟ್ಸ್ ಗಳ ವಿರುದ್ಧ ಮಾಧ್ಯಮಕ್ಕೆ ದಾಖಲೆ ಒದಗಿಸಿದ್ದ ವಕೀಲ ವಿ. ರವಿಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ರೀಲ್ಸ್ ಮಾಡಿ ಹಣ ಮಾಡುತ್ತಿದ್ದೀರಿ ಎಂದು ಆರೋಪಿಸಿ ರವಿಕುಮಾರ್ ಅವರನ್ನು  ವಕೀಲರ ಪರಿಷತ್‌ ನಿಂದ ಅಮಾನತು ಮಾಡಿ‌ ಆದೇಶ ಹೊರಡಿಸಲಾಗಿದೆ. ಅಲ್ಲದೆ ಖಾಸಗಿ ಚಾನೆಲ್ ಗಳಿಗೆ ಪ್ರತಿಕ್ರಿಯೆ ನೀಡದಂತೆ, ಜೊತೆಗೆ ಚಾನೆಲ್ ಗಳಿಗೆ ನೀಡಿರುವ ರಿಯಾಕ್ಷನ್ ಡಿಲೀಟ್ ಮಾಡುವಂತೆ ವಕೀಲರಿಗೆ ತಾಕೀತು ಮಾಡಲಾಗಿದೆ

ಈ ಕುರಿತು ಪ್ರತಿಕ್ರಿಯಿಸಿರುವ  ವಕೀಲ ರವಿಕುಮಾರ್, ಬಹುತೇಕ ವಕೀಲರು ಬಹುತೇಕ ವಿಚಾರಗಳಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಅಮಾನತು ಮಾಡಿರುವವರೇ ಖಾಸಗಿ ಯೂಟ್ಯೂಬ್ ಮಾಡಿಕೊಂಡಿದ್ದಾರೆ. ಅವರೇ ರೀಲ್ಸ್ ಮಾಡಿ‌ ಹಣ ಮಾಡಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಬಿನಿ ಅಕ್ರಮ‌ ರೆಸಾರ್ಟ್ಸ್ ಹತ್ತಿಕ್ಕುವ ಯತ್ನ ನಡೆಯುತ್ತಿದೆ. ನಾನು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ. ಅಮಾನತು ಖಂಡಿಸಿ ನ್ಯಾಯಲಯಕ್ಕೆ ದಾವೆ ಹೂಡಿದ್ದೇನೆ. ಸದ್ಯದಲ್ಲೇ ಅಮಾನತು ಆದೇಶ ರದ್ದಾಗಿ ಮತ್ತಷ್ಟು ಹೋರಾಟ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Key words: Lawyer, V. Ravikumar, suspension, against, illegal resorts, Mysore