Friday, October 2, 2026

BDA Apartments

Home Front Page ಬಿಎಸ್ ವೈ ಕಡೆಗಣನೆ ಬಿಜೆಪಿಗೆ ದೊಡ್ಡ ಶಾಪ- ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ.

ಬಿಎಸ್ ವೈ ಕಡೆಗಣನೆ ಬಿಜೆಪಿಗೆ ದೊಡ್ಡ ಶಾಪ- ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ.

ಬೆಂಗಳೂರು,ಆಗಸ್ಟ್,31,2023(www.justkannada.in): ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಕಡೆಗಣಿಸುವುದು ಬಿಜೆಪಿಗೆ ದೊಡ್ಡ ಶಾಪ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಎಂ.ಪಿ ರೇಣುಕಾಚಾರ್ಯ, ಬಿಎಸ್ ವೈ ಕಡೆಗಣಿಸಿದ್ದು ಬಿಜೆಪಿಗೆ ದೊಡ್ಡ ಶಾಪ. ಬಿವೈ ವಿಜಯೇಂದ್ರರನ್ನ ಮೂಲೆಗುಂಪು ಮಾಡಿದ್ದಾರೆ.  ನಾನು ಪಕ್ಷ ವಿರೋಧಿ ಅಲ್ಲ, ಪ್ರಧಾನಿ ಮೋದಿ, ಅಮಿತ್ ಶಾ ವಿರೋಧಿ ಅಲ್ಲ ಎಂದರು. ಬಿಎಸ್ ವೈ ಕಡೆಗಣನೆ ಬಿಜೆಪಿಗೆ ದೊಡ್ಡ ಶಾಪ- ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ renuka...

ಪಕ್ಷ ನನಗೆ ನೋಟಿಸ್ ಕೊಟ್ಟಿದೆ.  ನಾನು ಉತ್ತರಿಸಿಲ್ಲ. ಬೇಷರತ್ ನೋಟಿಸ್ ವಾಪಸ್ ಪಡೆಯಬೇಕು. ವಿರೋಧ ಪಕ್ಷದ ನಾಯಕ ಬಿಜೆಪಿ ರಾಜ್ಯಾಧ್ಯಕ್ಷ ಇನ್ನೂ ಆಯ್ಕೆಯಾಗಿಲ್ಲ. ರಾಜ್ಯ ಬಿಜೆಪಿಯಲ್ಲಿ ಸಂಘಟನೆ ಕೊರತೆ ಕಾಣುತ್ತಿದೆ.  ಕೆಲ ವ್ಯಕ್ತಿಗಳ ಧೋರಣೆ ಬಗ್ಗೆ  ನಾನು ಮಾತನಾಡಿದ್ದೇನೆ ಎಂದು  ರೇಣುಕಾಚಾರ್ಯ ತಿಳಿಸಿದರು.

Key words: Ignoring –BS Yeddyurappa -big curse -BJP- Former MLA -MP Renukacharya.