ಐಸಿಸಿ ಟ್ವೆಂಟಿ-20 ಬ್ಯಾಟ್ಸ್ಮನ್ ಶ್ರೇಯಾಂಕ: ವಿರಾಟ್ ಕೊಹ್ಲಿ @7, ಕೆ.ಎಲ್.ರಾಹುಲ್ @7

ಬೆಂಗಳೂರು, ಏಪ್ರಿಲ್ 29, 2021 (www.justkannada.in): ಐಸಿಸಿ ಟ್ವೆಂಟಿ-20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ  ವಿರಾಟ್ ಕೊಹ್ಲಿ ಮತ್ತು ಕೆ.ಎಲ್.ರಾಹುಲ್ ಕ್ರಮವಾಗಿ ಐದನೇ ಮತ್ತು ಏಳನೇ ಸ್ಥಾನಗಳನ್ನು ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ ಟಾಪ್ -10ರೊಳಗೆ ಪ್ರವೇಶಿಸಿದ್ದಾರೆ. ಇಂಗ್ಲೆಂಡ್ ನಾಯಕ ಇಯಾನ್ ಮೋರ್ಗನ್ ಮತ್ತು ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದ್ದಾರೆ. ರೋಹಿತ್ ಶರ್ಮಾ ಏಳನೇ ಸ್ಥಾನದಲ್ಲಿದ್ದಾರೆ. ಕೇನ್ ವಿಲಿಯಮ್ಸನ್ ಇನ್ನೂ ಟೆಸ್ಟ್ ಬ್ಯಾಟ್ಸ್ ಮನ್‌ಗಳಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಪ್ಯಾಟ್ ಕಮ್ಮಿನ್ಸ್ (908) , ಭಾರತದ ರವಿಚಂದ್ರನ್ ಅಶ್ವಿನ್ (850) ಬೌಲರ್‌ಗಳಲ್ಲಿ ಗಮನಾರ್ಹ (48 ಅಂಕಗಳು) ಮುನ್ನಡೆ ಸಾಧಿಸಿದ್ದಾರೆ.