ಕೊರೋನಾ ಸೋಂಕಿಗೆ ಗ್ರಾ.ಪಂ ಸಿಬ್ಬಂದಿ ಬಲಿ…

ಮೈಸೂರು,ಏಪ್ರಿಲ್,29,2021(www.justkannada.in):  ರಾಜ್ಯದಲ್ಲಿ ಕೊರೋನಾ ಮಹಾಮಾರಿ 2ನೇ ಅಲೆ ದಿನೇ ದಿನೇ ಹೆಚ್ಚುತ್ತಿದ್ದು ಸೋಂಕಿಗೆ ಹಲವು ಮಂದಿ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಮೈಸೂರು ಜಿಲ್ಲೆಯಲ್ಲಿ ಗ್ರಾಮಪಂಚಾಯಿತಿ ಸಿಬ್ಬಂದಿಯೊಬ್ಬರು ಕೋವಿಡ್ ಗೆ ಬಲಿಯಾಗಿರುವ ಘಟನೆ ನಡೆದಿದೆ.jk

ಸುನಂದಾ( 26 ) ಎಂಬುವರೇ ಕೊರೋನಾಗೆ ಬಲಿಯಾದ ಗ್ರಾಮಪಂಚಾಯಿತಿ ಸಿಬ್ಬಂದಿ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಮಾಯಿಗೌಡನಹಳ್ಳಿ ಗ್ರಾಮ ಪಂಚಾಯತ್ ನಲ್ಲಿ ಕ್ಲರ್ಕ್ ಆಗಿ ಇವರು ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಭಾನುವಾರ ಮೈಸೂರಿನ ಕೋವಿಡ್ ಆಸ್ವತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ ಸುನಂದ ಸಾವನ್ನಪ್ಪಿದ್ದಾರೆ.

ತಾಲೂಕಿನ ಹಾಡ್ಯ ಗ್ರಾಮದವರಾದ ಸುನಂದ ಅವರು ಹುಣಸೂರು ತಾಲೂಕಿನ ರಾಮೇನಹಳ್ಳಿಗೆ ವಿವಾಹ ವಾಗಿದ್ದರು. ಅಲ್ಲಿಂದ ಇಲ್ಲಿಗೆ ಓಡಾಡಿಕೊಂಡು  ಮಾಯಗೌಡನಹಳ್ಳಿ ಗ್ರಾ.ಪಂನಲ್ಲಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇದೀಗ ಇವರು ಕೊರೋನಾಗೆ ಬಲಿಯಾಗಿರುವುದು ಗ್ರಾ.ಪಂ.ಅಧಿಕಾರಿಗಳು .ಸಿಬ್ಬಂದಿಗಳು ಮತ್ತು ಜನಪ್ರತಿನಿಧಿಗಳಲ್ಲಿ ಆತಂಕ ಹೆಚ್ಚಿಸಿದೆ.

Key words: coronavirus-grama panchayath- Clerk-death- mysore