ಇಂದು ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಸೆಣೆಸಾಟ

ಬೆಂಗಳೂರು, ಏಪ್ರಿಲ್ 29, 2021 (www.justkannada.in):

ಐಪಿಎಲ್’ನಲ್ಲಿ ಇಂದು  ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೆಣೆಸಾಡಲಿವೆ.

ಮುಂಬೈ ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ಗೆಲುವಿನ ಹಳಿಗೆ ಮರಳಲು ಉತ್ತಮ ಪ್ರದರ್ಶನ ನೀಡಲೇಬೇಕಿದೆ.

ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಎರಡು ತಂಡಗಳು ಕೂಡ ಆಡಿದ 5 ಪಂದ್ಯಗಳಲ್ಲಿ ತಲಾ ಮೂರು ಸೋಲು ಹಾಗೂ ಎರಡು ಗೆಲುವು ಸಾಧಿಸಿದೆ.

ನೆಟ್‌ರನ್‌ರೇಟ್‌ನಲ್ಲಿ ಆರ್‌ಆರ್‌ಗಿಂತ ಅಲ್ಪ ಮುನ್ನಡೆಯಲ್ಲಿರುವ ರೋಹಿತ್ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ ರಾಜಸ್ಥಾನ್ 7ನೇ ಸ್ಥಾನದ್ಲಲಿದೆ.