Thursday, August 13, 2026

BDA Apartments

Home Front Page ICC Test Cricket Ranking: ಮತ್ತೆ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

ICC Test Cricket Ranking: ಮತ್ತೆ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ

ಬೆಂಗಳೂರು, ಮೇ 14, 2021 (www.justkannada.in): ಐಸಿಸಿ ಟೆಸ್ಟ್  Rankingನಲ್ಲಿ ಭಾರತ ಮತ್ತೆ ಮೊದಲ ಸ್ಥಾನ ಪಡೆದುಕೊಂಡಿದೆ.

ಐಸಿಸಿ ಇಂದು ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಭಾರತ 121 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.

ವಿಶ್ವ ಟೆಸ್ಟ್ ಪಂದ್ಯದಲ್ಲಿ ಭಾರತದ ಎದುರಾಳಿಯಾಗಿರುವ ನ್ಯೂಜಿಲ್ಯಾಂಡ್ 120 ಅಂಕಗಳೊಂದಿಗೆ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಭಾರತ 24 ಪಂದ್ಯಗಳಲ್ಲಿ 1914 ಪಾಯಿಂಟ್ ಗಳಿಸಿ ಮೊದಲ ಸ್ಥಾನಕ್ಕೇರಿದ್ದರೆ ನ್ಯೂಜಿಲ್ಯಾಂಡ್ ತಾನಾಡಿದ 18 ಪಂದ್ಯಗಳಲ್ಲಿ 2166 ಪಾಯಿಂಟ್‍ಗಳಿಸಿ ಎರಡನೆ ಸ್ಥಾನ ಪಡೆದುಕೊಂಡಿದೆ.

ಇಂಗ್ಲೆಂಡ್ 109 ಅಂಕಗಳೊಂದಿಗೆ ಮೂರನೆ ಸ್ಥಾನ ಪಡೆದುಕೊಂಡಿದ್ದರೆ ಬಲಿಷ್ಠ ಆಸ್ಟ್ರೇಲಿಯಾ ತಂಡ 108 ಅಂಕಗಳೊಂದಿಗೆ ನಾಲ್ಕನೆ ಸ್ಥಾನಕ್ಕೆ ಕುಸಿದಿದೆ.