ಕ್ರಿಕೆಟಿಗ ಚಾಹಲ್ ತಂದೆ-ತಾಯಿಗೆ ಕೊರೊನಾ: ಸ್ಥಿತಿ ಗಂಭೀರ

ಬೆಂಗಳೂರು, ಮೇ 14, 2021 (www.justkannada.in): ಯಜುವೇಂದ್ರ ಚಾಹಲ್ ತಂದೆ ಕೊರೋನಾ ಪಾಸಿಟಿವ್ ಆಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.

ಈ ಕುರಿತು ಚಾಹಲ್ ಪತ್ನಿ ಧನಶ್ರೀ ಮಾಹಿತಿ ನೀಡಿದ್ದಾರೆ.  ಐಪಿಎಲ್ ವೇಳೆ ಧನಶ್ರೀ ತಾಯಿ ಮತ್ತು ಸಹೋದರನಿಗೂ ಕೊರೋನಾ ಪಾಸಿಟಿವ್ ಇತ್ತು. ಆದರೆ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ.

ಚಾಹಲ್ ತಂದೆ ಗಂಭೀರ ಸ್ಥಿತಿಯಲ್ಲಿದ್ದು, ಆಗಾಗ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ಸ್ಥಿತಿ ವಿಚಾರಿಸುತ್ತಿರುವುದಾಗಿ ಧನಶ್ರೀ ಹೇಳಿದ್ದಾರೆ.

ಚಾಹಲ್ ತಾಯಿಗೂ ಕೊರೋನಾ ಪಾಸಿಟವ್ ಬಂದಿದ್ದು, ಸದ್ಯಕ್ಕೆ ಅವರು ಹೋಂ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.