ಐಸಿಸಿ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರ ಬಹುತೇಕ ಖಚಿತ

ಬೆಂಗಳೂರು, ಮೇ 05, 2021 (www.justkannada.in): ಐಸಿಸಿ ಟಿ20 ವಿಶ್ವಕಪ್‌ ಮೇಲೆ ಕೊರೊನಾ ಕರಿನೆರಳು ಬಿದ್ದಿದೆ.

14ನೇ ಐಪಿಎಲ್‌ ಪಂದ್ಯಾವಳಿ ಅನಿರ್ದಿಷ್ಟಾವಧಿಗೆ ಮುಂದೂಡಿದ ಬೆನ್ನಲ್ಲೇ ಭಾರತದ ಆತಿಥ್ಯದಲ್ಲೇ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ಕೂಡ ಭಾರತದಲ್ಲಿ ನಡೆಯುವುದು ಅನುಮಾನವಾಗಿದೆ.

ಕೋವಿಡ್‌ “ಮೂರನೇ ಅಲೆ’ಯ ಭೀತಿ ಇರುವುದರಿಂದ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳುವುದು ಬಹುತೇಕ ಖಚಿತಗೊಂಡಿದೆ.

ಜೂನ್‌ನಲ್ಲಿ ಐಸಿಸಿ ಸಭೆ ನಡೆಯಲಿದ್ದು, ಆಗ ಟಿ20 ಆತಿಥ್ಯ ಯಾರದಾಗಲಿದೆ ಎಂಬುದು ಇತ್ಯರ್ಥವಾಗಲಿದೆ.