ಐಪಿಎಲ್ ರದ್ದು: ಇಂದಿನಿಂದ ತವರಿನತ್ತ ವಿದೇಶಿ ಆಟಗಾರರ ‘ಸೇಫ್ ಪ್ರಯಾಣ’

ಬೆಂಗಳೂರು, ಮೇ 05, 2021 (www.justkannada.in): ಐಪಿಎಲ್ ಗಾಗಿ ಬಂದಿದ್ದ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಬಿಸಿಸಿಐ ಕಾರ್ಯೋನ್ಮುಖವಾಗಿದೆ.

ಟೂರ್ನಿಯನ್ನು ಏಕಾಏಕಿ ಮುಂದೂಡಿರುವ ಹಿನ್ನೆಲೆಯಲ್ಲಿ ವಿದೇಶಿ ಆಟಗಾರರನ್ನು ಅವರ ದೇಶಗಳಿಗೆ ಕಳುಹಿಸುವ ನಿಟ್ಟಿನಲ್ಲಿ ಮಾರ್ಗೋಪಾಯವನ್ನು ಕಂಡು ಹಿಡಿಯಲಾಗುವುದು ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ವಿಧಿಸಲಾದ ಪ್ರಯಾಣ ನಿರ್ಬಂಧಗಳಿಂದಾಗಿ ಲಾಭದಾಯಕ ಲೀಗ್‌ನಲ್ಲಿ ಭಾಗಿಯಾಗಿರುವ ವಿದೇಶಿಯರು ಆಯಾ ದೇಶಗಳಿಗೆ ಮರಳುವ ಬಗ್ಗೆ ಕಾಳಜಿ ವಹಿಸಿದಾಗ ಬಿಸಿಸಿಐ ವಿದೇಶಿ ಆಟಗಾರರಿಗೆ ಸುರಕ್ಷಿತವಾಗಿ ಮರಳುವ ನಿಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿತ್ತು.