ಜೂನ್ 10ಕ್ಕೆ ವಿಶ್ವಕಪ್ ಭವಿಷ್ಯ ನಿರ್ಧಾರ ಪ್ರಕಟ ಎಂದ ಐಸಿಸಿ

ದುಬೈ, ಮೇ 29, 2020 (www.justkannada.in): ಜೂನ್ 10ರಂದು ನಡೆಯುವ ಸಭೆಯಲ್ಲಿ ಟಿ.20 ವಿಶ್ವಕಪ್ ಕ್ರಿಕೆಟ್ ಆಯೋಜನೆ ನಿರ್ಧಾರ ಪ್ರಕಟಿಸುವುದಾಗಿ ಐಸಿಸಿ ಹೇಳಿದೆ.

ವಿಶ್ವಕಪ್‌ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಐಸಿಸಿ ನಿನ್ನೆ (ಮೇ 28) ಸಭೆಯನ್ನು ನಡೆಸಿತ್ತು. ಆದರೆ ಈ ಕುರಿತಾಗಿ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಂಡಿಲ್ಲ.

ಕೊರೊನಾ ವೈರಸ್‌ನಿಂದಾಗಿರುವ ಸಂಕಷ್ಟದಿಂದಾಗಿ ಈ ಹಿಂದೆ ನಿಗದಿಯಾಗಿರುವ ಪ್ರಕಾರ ವಿಶ್ವಕಪ್ ಆಯೋಜನೆ ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಹೇಳಿದೆ. ಆದರೆ ಇದೀಗ ವಿಶ್ವಕಪ್ ಆಯೋಜನೆ ಅಥವಾ ಮುಂದೂಡುವ ವಿಚಾರವಾಗಿ ಜೂನ್ 10 ರಂದು ನಡೆಯುವ ಸಭೆಯಲ್ಲಿ ಐಸಿಸಿ ನಿರ್ಧರಿಸಲಿದೆ.