ಮತ್ತೆ ಕ್ರಿಕೆಟ್ ! ಟೀಂ ಇಂಡಿಯಾದ ಆಸ್ಟ್ರೇಲಿಯಾ ಪ್ರವಾಸ ವೇಳಾಪಟ್ಟಿ ಪ್ರಕಟ

ಮೆಲ್ಬೋರ್ನ್, ಮೇ 29, 2020 (www.justkannada.in): ಅಕ್ಟೋಬರ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ವೇಳಾಪಟ್ಟಿಯನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ.

ಅಕ್ಟೋಬರ್ 11 ರಂದು ಬ್ರಿಸ್ಟೇನ್ ನಲ್ಲಿ ಟಿ20 ಸರಣಿ ಆಡುವುದರೊಂದಿಗೆ ಅಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಲಿದೆ. ಅಕ್ಟೋಬರ್ 14- ಕ್ರಯಾನ್ ಬೆರ್ರಾದಲ್ಲಿ ಮೊದಲ ಟಿ 20, ಅಕ್ಟೋಬರ್ 17- ಅಡಿಲೇಟ್ ನಲ್ಲಿ 2 ನೇ ಮತ್ತು 3 ನೇ ಟಿ20 ಪಂದ್ಯ ಆಡಲಿದೆ.

ಟಿ20 ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಡಿಸೆಂಬರ್ 3 ರಿಂದ ಬ್ರಿಸ್ಟೇನ್ ನಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯಾಕ್ಕೆ ವಾಪಸಾಗಲಿದೆ.

ಟೆಸ್ಟ್ ಸರಣಿಯ ಬಳಿಕ ಜನವರಿ 12 ರಿಂದ ಪರ್ತ್ ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ.