ಇಂಗ್ಲೆಂಡ್ ತಂಡದ ನಾಯಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದ ಇಯಾನ್ ಮಾರ್ಗನ್‌

ಲಂಡನ್, ಆಗಸ್ಟ್ 17, 2019 (www.justkannada.in): ಇಂಗ್ಲೆಂಡ್‌ಗೆ ಚೊಚ್ಚಲ ಐಸಿಸಿ ವಿಶ್ವಕಪ್‌ ತಂದುಕೊಟ್ಟ ನಾಯಕ ಇಯಾನ್ ಮಾರ್ಗನ್‌ ನಾಯಕತ್ವಕ್ಕೆ ಗುಡ್ ಬೈ ಹೇಳುವ ಮುನ್ಸೂಚನೆ ನೀಡಿದ್ದಾರೆ.

ಸತತವಾಗಿ ಗಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಯಾನ್ ಮಾರ್ಗನ್‌ ನಿಗದಿತ ಓವರ್‌ಗಳ ತಂಡದ ನಾಯಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.

ಸೌಥ್‌ಹ್ಯಾಮ್ಟನ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ ಟೂರ್ನಿಯ ವೆಸ್ಟ್ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಮಾರ್ಗನ್‌ ಬೆನ್ನು ಸೆಳೆತಕ್ಕೆ ಒಳಗಾಗಿದ್ದರು.

ಇನ್ನೂ ಅವರು ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹಾಗಾಗಿ, ಇಂಗ್ಲೆಂಡ್‌ ತಂಡದ ನಾಯಕತ್ವವನ್ನು ತೊರೆಯುವ ಸುಳಿವು ನೀಡಿದ್ದಾರೆ ಎನ್ನಲಾಗಿದೆ.