ಕ್ರಿಕೆಟ್: ರವಿಶಾಸ್ತ್ರಿ ಮುಂದುವರಿಕೆಗೆ ಶಿಫಾರಸು, ಸೋಷಿಯಲ್ ಮೀಡಿಯಾದಲ್ಲಿ ಟೀಕೆ

ಬೆಂಗಳೂರು, ಆಗಸ್ಟ್ 17, 2019 (www.justkannada.in): ಕ್ರಿಕೆಟ್‌ ಸಲಹಾ ಸಮಿತಿಯು(ಸಿಎಸಿ) ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ರವಿಶಾಸ್ತ್ರಿ ಅವರನ್ನು ಮರುನೇಮಕ ಮಾಡುವಂತೆ ಶಿಫಾರಸು ಮಾಡಿದೆ ಎಂದು.

ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ಬಿಸಿಸಿಐ ಪ್ರಕಟಿಸಿರುವ ಟ್ವೀಟ್‌ಗೆ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮುಖ್ಯ ಕೋಚ್‌ ಹುದ್ದೆಗೆ ರವಿಶಾಸ್ತ್ರಿ ಅವರ ಹೆಸರನ್ನು ಶಿಫಾರಸು ಮಾಡುವುದಾಗಿ ಆಯ್ಕೆ ಸಮಿತಿ ತಿಳಿಸಿತ್ತು. ಹೀಗಾಗಿ ರವಿಶಾಸ್ತ್ರಿ ಅವರು ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಈ ಶಿಫಾರಸ್ಸಿಗೆ ಬಗ್ಗೆ ಬಹುತೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.