ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಸಾಥ್ ನೀಡಿದ ದರ್ಶನ್

ಬೆಂಗಳೂರು, ಆಗಸ್ಟ್ 17, 2019 (www.justkannada.in): ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಚಿತ್ರಕ್ಕೆ ದರ್ಶನ್ ಸಾಥ್ ನೀಡಿದ್ದಾರೆ.

ಈ ಹಿಂದೆ ರವಿಚಂದ್ರನ್ ನಟನೆಯ ‘ದಶರಥ’ ಚಿತ್ರದ ಟೈಟಲ್ ಟ್ರ್ಯಾಕ್ ಗೆ ಧ್ವನಿಯಾಗಿದ್ದ ದರ್ಶನ್ ಇದೀಗ ಮನೋರಂಜನ್ ನಟಿಸುತ್ತಿರುವ ‘ ಪ್ರಾರಂಭ ‘ ಚಿತ್ರಕ್ಕೂ ಧ್ವನಿ ನೀಡಿದ್ದಾರೆ.

ಈ ಸಿನಿಮಾ ಶುರುವಾಗಿ ಬಹಳ ದಿನಗಳಾಗಿತ್ತು, ಇದೀಗ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಹಂತದಲ್ಲಿದೆ.

ಈ ಚಿತ್ರದ ಟೀಸರ್ ಗೆ ಡಿ-ಬಾಸ್ ದರ್ಶನ್ ವಾಯ್ಸ್ ನೀಡುವುದರ ಮೂಲಕ ಚಿತ್ರದ ಒಂದು ಭಾಗವಾಗಿದ್ದಾರೆ. ಅಂದ ಹಾಗೆ ಈ ಟೀಸರ್ ಬರುವ ದಿನಾಂಕ 23 ರಂದು ರಿಲೀಸ್ ಆಗುತ್ತಿದೆ.