ಅರ್ಜುನ್ ಸರ್ಜಾ ಬರ್ತ್ ಡೇಗೆ ಸರ್ಪ್ರೈಸ್ ನೀಡಿದ ಚಾಲೆಂಜಿಂಗ್ ಸ್ಟಾರ್ !

ಬೆಂಗಳೂರು, ಆಗಸ್ಟ್ 17, 2019 (www.justkannada.in): ನಟ ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ನಟ ದರ್ಶನ್ ಸರ್ಪ್ರೈಸ್ ನೀಡಿದ್ದಾರೆ.

ಹೌದು, ಅರ್ಜುನ್ ಸರ್ಜಾ ಅವರಿಗೆ ಅಚ್ಚರಿಯುಂಟು ಮಾಡುವಂತೆ ದರ್ಶನ್ ಸರ್ಜಾರವರ ಮನೆಗೆ ಭೇಟಿ ನೀಡಿದ್ದಾರೆ. ಚೆನೈಗೆ ಭೇಟಿ ನೀಡಿ ಬಂದಿದ್ದಾರೆ ದರ್ಶನ್.

ಅರ್ಜುನ್ ಸರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ದಚ್ಚು ಕೂಡ ಭೇಟಿ ನೀಡಿ ಕೇಕ್ ಕಟ್ ಮಾಡಿ ಶುಭಕೋರಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ‘ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್ ಹಾಗೂ ಅರ್ಜುನ್ ಸರ್ಜಾ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿದ್ದರು.

ಅರ್ಜುನ್ ಸರ್ಜಾರವರ ಹುಟ್ಟುಹಬ್ಬದ ವಿಡಿಯೋ ಹಾಗೂ ಫೋಟೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.