ಲಾಡ್ಜ್ ನಲ್ಲಿದ್ದ ಅನುಮಾನಸ್ಪದ ವ್ಯಕ್ತಿಗಳು ಪೊಲೀಸರ ವಶಕ್ಕೆ: ತೀವ್ರ ವಿಚಾರಣೆ….

ಮಂಗಳೂರು,ಆ,17,2019(www.justkannada.in) ಲಾಡ್ಜ್ ನಲ್ಲಿದ್ದ  ಅನುಮಾನಾಸ್ಪದ ವ್ಯಕ್ತಿಗಳನ್ನ ಮಂಗಳೂರಿನ ಕದ್ರಿ ಠಾಣಾ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಂಪ್ ವೆಲ್ ಬಳಿಯ ಲಾಡ್ಜ್‌ನಲ್ಲಿ ಅನುಮಾನಾಸ್ಪದ 9 ಮಂದಿಯನ್ನು ಮಂಗಳೂರಿನ ಕದ್ರಿ ಪೊಲೀಸರು ವಶಕ್ಕೆ ಪಡೆದಿದ್ದು, ಬಂಧಿತರು ಮಡಿಕೇರಿ, ಕೇರಳ ಮತ್ತು ಮಂಗಳೂರು ನಿವಾಸಿಗಳು ಎನ್ನಲಾಗುತ್ತಿದೆ. ಈ ವೇಳೆ ನ್ಯಾಶನಲ್ ಕ್ರೈಮ್ ಇನ್ವಿಶ್ಟಿಗೇಶನ್ ಬ್ಯೂರೋ ಎಂಬ ಫಲಕವಿರುವ ಕಾರು ವಶಕ್ಕೆ ಪಡೆಯಲಾಗಿದ್ದು  ಕಾರಿನಲ್ಲಿ Govt of India ಎಂಬ ಬರಹವಿದೆ. ಮಂಗಳೂರು ಪೊಲೀಸರು ಅನುಮಾನಾಸ್ಪದ ವ್ಯಕ್ತಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಮಂಗಳೂರು ಪೊಲೀಸ್ ಆಯುಕ್ತ ಪಿಎಸ್ ಹರ್ಷ ಅವರು ಮಾಹಿತಿ ನೀಡಿದ್ದು, ಮದನ್, ಸುನೀಲ್, ಪೀಟರ್, ಅಬ್ದುಲ್ ಲತೀಫ್ ಸೇರಿ 8 ಮಂದಿಯನ್ನ ಬಂಧಿಸಲಾಗಿದೆ. ಮೇಲ್ನೋಟಕ್ಕೆ ಇವರದ್ದು ವಂಚನೆಯ ಜಾಲ ಎಂಬುದು ತಿಳಿದು ಬಂದೆ.  ಪೊಲೀಸರ ತಪಾಸಣೆ ವೇಳೆ  ಬಂಧಿತರು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಬಂಧಿತರಿಂದ ರಿವಾಲ್ವಾರ್, 8 ಗುಂಡುಗಳನ್ನ ವಶಕ್ಕೆ ಪಡೆಯಲಾಗಿದೆ.  ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

Key words: mangalore-suspects – lodge -taken – custody – police.