ಒಲಿಂಪಿಯನ್ ಪಿ.ಟಿ.ಉಷಾಗೆ ಐಎಎಎಫ್ ಗೌರವ

ನವದೆಹಲಿ, ಸೆಪ್ಟೆಂಬರ್ 26, 2019 (www.justkannada.in): ಭಾರತದ ಮಾಜಿ ಅಥ್ಲೀಟ್ ಹಾಗೂ ಒಲಿಂಪಿಯನ್ ಪಿ.ಟಿ. ಉಷಾಗೆ ಪ್ರತಿಷ್ಠಿತ ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್)ವೆಟರನ್ ಪಿನ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ದೋಹಾದಲ್ಲಿ ನಡೆದ ಐಎಎಎಫ್‌ನ 52ನೇ ಸಮ್ಮೇಳನದಲ್ಲಿ ಉಷಾ ಪ್ರಶಸ್ತಿ ಸ್ವೀಕರಿಸಿದರು.

ಐಎಎಎಫ್ ಹಾಗೂ ಅಧ್ಯಕ್ಷ ಸೆಬಾಸ್ಟಿಯನ್ ಕೊ ಅವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ನಮ್ಮ ದೇಶದಲ್ಲಿ ಅಥ್ಲೆಟಿಕ್ಸ್ ಬೆಳವಣಿಗೆಗೆ ನಿರಂತರವಾಗಿ ಕೊಡುಗೆ ನೀಡಲು ನಾನು ಎದುರು ನೋಡುತ್ತಿರುವೆ” ಎಂದು ಉಷಾ ಟ್ವೀಟ್ ಮಾಡಿದ್ದಾರೆ.