ಕ್ರಿಕೆಟ್: ಭಾರತ-ಶ್ರೀಲಂಕಾ ಟಿ20 ಸರಣಿಗೆ ವೇಳಾಪಟ್ಟಿ ಪ್ರಕಟ

ನವದೆಹಲಿ, ಸೆಪ್ಟೆಂಬರ್ 26, 2019 (www.justkannada.in):  2020 ರ ಜನವರಿಯಲ್ಲಿ ಭಾರತ-ಶ್ರೀಲಂಕಾ ಟಿ20 ಸರಣಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವೇಳಾ ಪಟ್ಟಿ ಪ್ರಕಟಿಸಿದೆ.

ಜಿಂಬಾಬ್ವೆ ವಿರುದ್ಧ ನಡೆಯಬೇಕಿದ್ದ ಸರಣಿ ಬದಲು ಶ್ರೀಲಂಕಾ ವಿರುದ್ಧ ಭಾರತ ಟಿ20 ಸರಣಿಯಲ್ಲಿ ಭಾಗವಹಿಸಲಿದೆ. ಸರಣಿಯಲ್ಲಿ ಮೂರು ಪಂದ್ಯಗಳು ನಡೆಯಲಿವೆ.

ಭಾರತ ಶ್ರೀಲಂಕಾ ನಡುವಿನ ಟಿ20 ಸರಣಿಯ ವೇಳಾ ಪಟ್ಟಿ

ಜನವರಿ 5- ಗುವಾಹಟಿಯಲ್ಲಿ ಮೊದಲ ಟಿ20

ಜನವರಿ 7- ಇಂದೋರ್ ನಲ್ಲಿ ದ್ವಿತೀಯ ಟಿ20

ಜನವರಿ 10- ಪುಣೆಯಲ್ಲಿ ಅಂತಿಮ ಟಿ20 ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ವೇಳಾಪಟ್ಟಿ ಪ್ರಕಟಿಸಿದೆ.