ಮೈಸೂರಿನ ಎನ್.ಆರ್ ರಂಗರಾವ್ & ಸನ್ಸ್ ಪ್ರೈ. ಲಿ.ಗೆ ರಫ್ತು ಉತ್ಕೃಷ್ಟತಾ ಪ್ರಶಸ್ತಿ….

ಮೈಸೂರು, ಸೆ,26, 2019(www.justkannada.in):  ಸುಸ್ಥಿರ ಅಭಿವೃದ್ಧಿಯನ್ನು ತನ್ನ ಮುಖ್ಯ ಧ್ಯೇಯವಾಗಿಟ್ಟುಕೊಂಡಿರುವ ಮೈಸೂರಿನ ಎನ್ ಆರ್  ಗರಾವ್& ಸನ್ಸ್ ಪ್ರೈ. ಲಿಮಿಟೆಡ್ ಈ ಬಾರಿಯ ಪ್ಲಾಟಿನಂ ವಿಭಾಗದ ರಫ್ತು ಉತ್ಕೃಷ್ಟತಾ ಪ್ರಶಸ್ತಿಗೆ ಭಾಜನವಾಗಿದೆ.

ಸಣ್ಣ ಮತ್ತು ಮಧ್ಯಮಕೈಗಾರಿಕಾ ವಲಯದರಫ್ತು ಶ್ರೇಷ್ಠತೆ ಮತ್ತು ಉತ್ಪಾದನಾ ಉತ್ಕೃಷ್ಟತೆಗಾಗಿ ಕರ್ನಾಟಕ ಸರ್ಕಾರ ಈ ಪ್ರಶಸ್ತಿಯನ್ನು ನೀಡುತ್ತದೆ.

ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ)ದ ಸದಸ್ಯ ಸಂಸ್ಥೆಯಾಗಿರುವ ಮೈಸೂರು ಮೂಲದ ಎನ್.ಆರ್. ಸಮೂಹವು ಇತರ ಕೆಲವು ಕೈಗಾರಿಕೆಗಳ ಜೊತೆಗೆ ಈ ಉತ್ಕೃಷ್ಟತಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪಅವರಿಂದ ಎನ್. ರಂಗರಾವ್& ಸನ್ಸ್ ಪ್ರೈವೇಟ್ ಲಿಮಿಟೆಡ್ ನ ರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ದ್ವಾರಕನಾಥ್ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಎನ್.ರಂಗರಾವ್& ಸನ್ಸ್ ಪ್ರೈ.ಲಿ.ನ ಪಾಲುದಾರ ಅರ್ಜುನ್ ರಂಗ `ಕರ್ನಾಟಕ ಸರ್ಕಾರದಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನಮಗೆ ಅತೀವ ಸಂತಸವಾಗಿದೆ.  ಎನ್.ಆರ್. ಸಮೂಹದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೆಲಸಗಾರರನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ. ಅವರ ಪರಿಶ್ರಮವಿಲ್ಲದೆ ಇದೆಲ್ಲಾ ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪ್ರಯತ್ನ ಮತ್ತು ಶ್ರಮವನ್ನು ಗುರುತಿಸಿ ಈ ಪ್ರತಿಷ್ಠಿತಗೌರವಕ್ಕೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿದ್ದಕ್ಕಾಗಿ ಆಯ್ಕೆ ಸಮಿತಿಯ ತೀರ್ಪುಗಾರರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ’ ಎಂದರು.

ಮೈಸೂರು ಮೂಲದ ಎನ್.ಆರ್. ಸಮೂಹದ ಭಾಗವಾಗಿರುವ ಸೈಕಲ್ ಪ್ಯೂರ್ಅಗರಬತ್ತೀಸ್ ಭಾರತದ ಪ್ರಮುಖ ಧೂಪದ್ರವ್ಯ ಮಾರುಕಟ್ಟೆಯ ಪ್ರವರ್ತಕ ಬ್ರಾಂಡ್ ಆಗಿದ್ದು, ಸುಮಾರು 70ಕ್ಕೂ ಅಧಿಕ ದೇಶಗಳಿಗೆ ಅದುತನ್ನಗುಣಮಟ್ಟದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

ರಫ್ತು ವಲಯದಲ್ಲಿ ಸಂಸ್ಥೆಯ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ವಿವಿಧರಫ್ತು ವಿಭಾಗಗಳಲ್ಲಿನ ಅತ್ಯುತ್ತಮ ಸಾಧನೆಗಾಗಿತನ್ನ ಸದಸ್ಯ ರಫ್ತುದಾರರನ್ನು ಗುರುತಿಸಿ ರಾಜ್ಯ ಸರ್ಕಾರವು ಈ ಪ್ರಶಸ್ತಿಯನ್ನು ಮಾಡುತ್ತ ಬಂದಿದೆ.

ಎನ್.ಆರ್. ಸಮೂಹದ ಬಗ್ಗೆ…

ಮೈಸೂರು ಮೂಲದ ಎನ್ಆರ್ ಸಮೂಹ 1948ರಲ್ಲಿ ಎನ್. ರಂಗರಾವ್ ಅವರಿಂದ ಸ್ಥಾಪಿಸಲ್ಪಟ್ಟಿತು. ಗೃಹ ಕೈಗಾರಿಕೆಯಾಗಿ ಸ್ಥಾಪನೆಯಾದ ಎನ್ಆರ್ ಸಮೂಹವು ಇಂದು ಭಾರತ ಮತ್ತು ವಿದೇಶದಲ್ಲಿ ಸ್ಥಾಪಿತ ಉಪಸ್ಥಿತಿಯನ್ನು ಹೊಂದಿರುವಒಂದು ಯಶಸ್ವಿಯಾದ ಸಂಘಟಿತ ಉದ್ಯಮ ಸಂಸ್ಥೆಯಾಗಿ ಹೊರಹೊಮ್ಮಿದೆ. ಸಮೂಹ ಇಂದು ವಿವಿಧ ವಹಿವಾಟು ಹೊಂದಿದೆ. ಇದರಲ್ಲಿ ರಿಪ್ಪಲ್ ಫ್ರಾಗ್ರನ್ಸ್ಅಡಿಯಲ್ಲಿ- ಸುಗಂಧ ದ್ರವ್ಯಗಳು (ಲಿಯಾ ಬ್ರಾಂಡ್ನರೂಂ ಫ್ರೆಷ್ನರ್ಸ್, ಕಾರ್ ಫ್ರೆಷ್ನರ್ಸ್) ಹಾಗೂ ಸುವಾಸನೆಯುಕ್ತ ವೆಲ್ನೆಸ್ ಹೋಂ ಉತ್ಪನ್ನಗಳು (ಐಆರ್ಐಎಸ್), ಫ್ಲೋರಲ್ಎಕ್ಸ್ಟ್ರಾಸ್ (ಎನ್ಇಎಸ್ಎಸ್ಒ) ಕೂಡ ಸೇರಿವೆ. ಸಮೂಹವು ತನ್ನ ಸಾಮಾಜಿಕ ಹೊಣೆಗಾರಿಯನ್ನು ಎನ್ಆರ್ ಫೌಂಡೇಷನ್ ಮೂಲಕ ನಿಭಾಯಿಸುತ್ತಿದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗೆ ಈಗ ಯುಕೆ ಮೂಲದಕಾರ್ಬನ್ ನ್ಯೂಟ್ರಲ್ ಕಂಪೆನಿಯಿಂದ ಕಾರ್ಬನ್ ನ್ಯೂಟ್ರಲ್ತೈಯಾರಕ ಎನ್ನುವ ಪ್ರಮಾಣೀಕರಣ ದೊರೆತಿದೆ. ಎನ್ಆರ್ ಸಮೂಹವ ಇಂದು ಕುಟುಂಬದ ಮೂರನೇ ಪೀಳಿಗೆ ಮುನ್ನಡೆಸುತ್ತಿದೆ.

Key words: mysore-NR Rangarao & Sons Pvt.-state  Export Excellence- Award