Wednesday, August 5, 2026

BDA Apartments

Home Front Page ಕ್ಷಮೆ ಕೇಳಿಲ್ಲ, ನನ್ನ ಹೇಳಿಕೆಗೆ ಈಗಲೂ ಬದ್ಧ: ಕೈ ಶಾಸಕ ಬಿ.ಆರ್.ಪಾಟೀಲ

ಕ್ಷಮೆ ಕೇಳಿಲ್ಲ, ನನ್ನ ಹೇಳಿಕೆಗೆ ಈಗಲೂ ಬದ್ಧ: ಕೈ ಶಾಸಕ ಬಿ.ಆರ್.ಪಾಟೀಲ

ಬೆಂಗಳೂರು, ಜುಲೈ 30, 2023 (www.justkannada.in): ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಕ್ಷಮೆಯನ್ನೂ ಕೇಳಿಲ್ಲ ಎಂದು ಶಾಸಕ ಬಿ.ಆರ್. ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಯಾರ ಕ್ಷಮೆಯನ್ನೂ ಕೇಳಿಲ್ಲ. ನನ್ನ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ಪಕ್ಷ ಬೇಕಿದ್ದರೆ ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿ ಎಂದು ಆಳಂದ ಬಿ.ಆರ್. ಪಾಟೀಲ ಹೇಳಿದ್ದಾರೆ.

‘ಕ್ಷಮೆ ಕೇಳುವವರು ಕೇಳಿರಬಹುದು. ನಾನಂತೂ ಯಾವುದೇ ಅಪರಾಧ ಮಾಡಿಲ್ಲ. ಕ್ಷಮೆ ಕೇಳುವ ಹೇಡಿತನವೂ ನನ್ನಲ್ಲಿಲ್ಲ’ ಎಂದು ಹೇಳಿದ್ದಾರೆ.  ಈ ಹಿಂದೆ ಪತ್ರ ಬರೆದ ಶಾಸಕರು ಕ್ಷಮೆ ಕೇಳಿದ್ದಾರೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ ಹೇಳಿಕೆ ನೀಡಿದ್ದರು.

‘ಕ್ಷಮೆ ಕೇಳುವವರು ಕೇಳಿರಬಹುದು. ನಾನಂತೂ ಯಾವುದೇ ಅಪರಾಧ ಮಾಡಿಲ್ಲ. ಕ್ಷಮೆ ಕೇಳುವ ಹೇಡಿತನವೂ ನನ್ನಲ್ಲಿಲ್ಲ’ ಎಂದು ಹೇಳಿದರು. ಪತ್ರದಲ್ಲಿ ಯಾವ ಅಂಶಗಳನ್ನು ಹೇಳಿದ್ದೇನೆಯೋ ಅದಕ್ಕೆ ಈಗಲೂ ಬದ್ಧನಾಗಿದ್ದೇನೆ ಎಂದಿದ್ದಾರೆ.