ಹೈಕಮಾಂಡ್, ಪಕ್ಷದ ವರಿಷ್ಠರು ಮನಸ್ಸು ಮಾಡಿದ್ರೆ ಮಂತ್ರಿಯಾಗುತ್ತೇನೆ- ಶಾಸಕ ಉಮೇಶ್ ಕತ್ತಿ…

ಬೆಳಗಾವಿ,ಜನವರಿ,12,2021(www.justkannada.in):  ‘ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರು ಮನಸ್ಸು ಮಾಡಿದರೆ ನಾನು ಮಂತ್ರಿಯಾಗುತ್ತೇನೆ. ನನಗೆ ಅವಕಾಶ ನೀಡಿದರೇ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ತಿಳಿಸಿದರು.jk-logo-justkannada-mysore

ಸಿಎಂ ಬಿಎಸ್ ಯಡಿಯೂರಪ್ಪ ಕರೆ ಮಾಡಿದ ಹಿನ್ನೆಲೆ ಇಂದು ಬೆಂಗಳೂರಿಗೆ ತೆರಳುವ ಮುನ್ನ ಮಾತನಾಡಿದ ಶಾಸಕ ಉಮೇಶ್ ಕತ್ತಿ, ‘ಸಭೆ ಇದೆ ಬೆಂಗಳೂರಿಗೆ ಬಾ ಎಂದು ಸಿಎಂ ಕರೆ ಮಾಡಿದ್ದಾರೆ. ಹೀಗಾಗಿ ಬೆಂಗಳೂರಿಗೆ ಹೋಗುತ್ತಿದ್ದೇನೆ  ವಾರದಲ್ಲಿ ಎರಡು ಮೂರು ಬಾರಿ  ಸಿಎಂ ನನಗೆ ಕರೆ ಮಾಡುತ್ತಿರುತ್ತಾರೆ; ಏನೇನೋ ಮಾತನಾಡುತ್ತಿರುತ್ತೇವೆ. ಅದನ್ನೆಲ್ಲಾ ಹೇಳಲು ಆಗಲ್ಲ ಎಂದರು. I am - minister - High Command- agree- MLA Umesh katti

ಹಾಗೆಯೇ ನಾನು ಎಂಟು ಬಾರಿ ಶಾಸಕನಾಗಿದ್ದೇನೆ. ಮೂರು ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಹೈಕಮಾಂಡ್ ಪಕ್ಷದ ವರಿಷ್ಠರು ಮನಸ್ಸು ಮಾಡಿದ್ರೆ ಮಂತ್ರಿಯಾಗುತ್ತೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ‌ ನಿಭಾಯಿಸಲು ಸಿದ್ಧ ಎಂದು ನುಡಿದರು.

Key words: I am – minister – High Command- agree- MLA Umesh katti