ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರಕ್ಕೆ ತೆರಳಿದ್ದ ಸಿ.ಪಿ ಯೋಗೇಶ್ವರ್ ಗೆ ಮತ್ತೆ ಮುಜುಗರ: ಗ್ರಾಮಸ್ಥರಿಂದ ತರಾಟೆ…

ಮೈಸೂರು,ನ,30,2019(www.justkannada.in): ನಿನ್ನೆಯಷ್ಟೆ  ಹುಣಸೂರು ಬಿಜೆಪಿ ಹೆಚ್.ವಿಶ್ವನಾಥ್ ಪರ  ಮತಯಾಚನೆಗೆ  ತೆರಳಿದ್ದ ವೇಳೆ ತಾಲ್ಲೂಕಿನ ಹನಗೋಡಿನ ಹೆಗ್ಗಂದೂರಿನಲ್ಲಿ ಮುಜಗರಕ್ಕೀಡಾಗಿದ್ದ ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಇದೀಗ ಮತ್ತೆ ಪ್ರಚಾರದ ವೇಳೆ ಮುಜುಗರ ಅನುಭವಿಸಿದ್ದಾರೆ.

ಹುಣಸೂರು ಉಪಚುನಾವಣೆ ಹಿನ್ನೆಲೆ  ಹೊಸಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಪರ ಪ್ರಚಾರಕ್ಕೆ ತೆರಳಿದ್ದ ಸಿ.ಪಿ ಯೋಗೇಶ್ವರ್ ಅವರನ್ನ ಗ್ರಾಮಕ್ಕೆ   ಪ್ರವೇಶಿಸದಂತೆ ಗ್ರಾಮಸ್ಥರು ಗಲಾಟೆ ಮಾಡಿದ ಘಟನೆ ನಡೆದಿದೆ. ಅಭ್ಯರ್ಥಿ ಜೊತೆಯಲ್ಲೇ ಬರುವಂತೆ ಸಿ.ಪಿ ಯೋಗೇಶ್ವರ್ ಗೆ ಗ್ರಾಮಸ್ಥರು ತಾಕೀತು ಮಾಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಹೆಚ್.ವಿಶ್ವನಾಥ್ ಒಮ್ಮೆಯೂ ಗ್ರಾಮಕ್ಕೆ ಬಂದಿಲ್ಲ. ಗ್ರಾಮಕ್ಕೆ ಬಾರದೆ ಹೇಗೆ ರಾಜೀನಾಮೆ ನೀಡಿದರು ಎಂದು ಬಿಜೆಪಿ ಮುಖಂಡ ಸಿ.ಪಿ ಯೋಗೇಶ್ವರ್ ಗೆ ಗ್ರಾಮಸ್ಥರು ಪ್ರಶ್ನಿಸಿದ್ದು ಯೋಗೇಶ್ವರ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯೂ ಹೆಗ್ಗಂದೂರಿನಲ್ಲಿ ಗ್ರಾಮಸ್ಥರು ಮುತ್ತಿಗೆ ಹಾಕಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಜತೆ ಗ್ರಾಮಕ್ಕೆ ಬರುವಂತೆ ತಾಕೀತು ಮಾಡಿದ್ದರು. ಇದೀಗ ಹೊಸಪುರದಲ್ಲೂ ಈ ಘಟನೆ ನಡೆದಿದ್ದು ಪ್ರಚಾರಕ್ಕೆ ಹೋದ ಕಡೆಗಳಲೆಲ್ಲಾ ಯೋಗೇಶ್ವರ್‌ ಮುಜುಗರ ಅನುಭವಿಸುವಂತಾಗಿದೆ.

key words:hunsur- CP Yogeshwar-campaigning – BJP candidate -H Vishwanath- Embarrassment