ಡಿ.ದೇವರಾಜ ಅರಸು ಮತ್ತು ಮೋದಿ ಒಂದೇ ಸಮೀಕರಣ ಎಂಬ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಕೈ ಅಭ್ಯರ್ಥಿ ಹೆಚ್.ಪಿ ಮಂಜುನಾಥ್…

ಮೈಸೂರು,ನ,16,2019(www.justkannada.in): ದೇವರಾಜ ಅರಸು ಮೋದಿ ಒಂದೇ ಸಮೀಕರಣ  ಎಂದು ಹೇಳಿಕೆ ನೀಡಿದ್ದ ಅನರ್ಹ ಶಾಸಕ ಹೆಚ್. ವಿಶ್ವನಾಥ್  ಗೆ ಕಾಂಗ್ರೆಸ್ ಅಭ್ಯರ್ಥಿ ಎಚ್‌ ಪಿ ಮಂಜುನಾಥ್‌ ತಿರುಗೇಟು ನೀಡಿದ್ದಾರೆ.

ದೇವರಾಜ  ಅರಸು ಅವರಿಗೆ ದೇವರಾಜು ಅರಸುನೇ ಸಾಟಿ. ದೇವರಾಜ ಅಸರು ಮುಂದೆ‌ ಮೋದಿ‌ ನಿಲಲ್ಲ. ಸಿದ್ದರಾಮಯ್ಯ ಸಹ ಸಾಟಿಯಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ಪಿ ಮಂಜುನಾಥ್, ದೇವರಾಜ ಅರಸು ಹೆಸರಲ್ಲಿ ಅಂಬೆಗಾಲು ಹಿಡುತ್ತಿದ್ದಾರೆ. ಮೋದಿಯನ್ನ ದೇಶದ ಜನರು ಐದೇ ವರ್ಷದಲ್ಲಿ ಮರೆತು ಬಿಟ್ಟಿದ್ದಾರೆ‌. ಅವರು ಮಾಡಿರುವ ಯಡವಟ್ಟುಗಳು ಮುಂದೆ‌ ಗೊತ್ತಾಗುತ್ತದೆ.ಧ್ವನಿ ಇಲ್ಲದ ವ್ಯಕ್ತಿಗಳನ್ನ ವಿಧನಾಸೌಧಕ್ಕೆ ಏರಿಸಿದವರು ದೇವರಾಜ ಅರಸು ಎಂದು ಹೇಳಿದರು.

ವಿಶ್ವನಾಥ್ ಮತ್ತೊಮ್ಮೆ ಗೆದ್ದರೆ ತಾಲ್ಲೂಕನ್ನೇ ಮಾರಿಬಿಟ್ಟು ಹೋಗೋ ಪ್ಲಾನ್ ಇದೆ. ಶಾಸಕರನ್ನಾಗಿ ಮಾಡಿದ್ದಕ್ಕೆ ಹುಣಸೂರಿಗೆ ಕಪ್ಪು ಮಸಿ ಬಳಿದಿದ್ದು ಸಾಕು. ಮಂತ್ರಿಯಾಗಿ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ? ಯೋಗೇಶ್ವರ್ ಹೆಸರಿನಲ್ಲಿ ಸಿಕ್ಕಿರುವ ಸೀರೆ ಹಿಂದೆ ವಿಶ್ವನಾಥ್ ಕೈವಾಡವಿದೆ. ಯೋಗೇಶ್ವರ್ ಪೋಟೋ ಬದಲು ವಿಶ್ವನಾಥ್ ಪೋಟೋ ಅಂಟಿಸುವ ಸಾಧ್ಯತೆ ಇತ್ತು. ಇಂತಹ ನೂರಾರು ಅಕ್ರಮಗಳಿಗೆ ಹುಣಸೂರಿನಲ್ಲಿ ಸಿದ್ದತೆಯಾಗಿದೆ. ಉಪಚುನಾವಣೆಗಳಲ್ಲಿ ಇಂತಹ ಅಕ್ರಮ ಎಲ್ಲೆ ಮೀರುತ್ತೆ. ಇದನ್ನ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ. ಕಾಂಗ್ರೆಸ್ ಈ ಬಗ್ಗೆ ಕಾನೂನು ಹೋರಾಟ ಮಾಡಲಿದೆ ಎಂದು ಮಂಜುನಾಥ್ ತಿಳಿಸಿದರು.

Key words:  hunsur –by-election-congress candidate-hp manjunath- h.vishwanath