ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಕೃಷಿಹೊಂಡಕ್ಕೆ ಕಾರು ಉರುಳಿ ಓರ್ವ ಸ್ಥಳದಲ್ಲೇ ಸಾವು…

ಮೈಸೂರು,ನ,16,2019(www.justkananda.in): ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿದ ಪರಿಣಾಮ ರಸ್ತೆ‌ ಪಕ್ಕದ ಕೃಷಿ ಹೊಂಡಕ್ಕೆ ಕಾರು ಉರುಳಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೊಡ್ಡಕವಲಂದೆ ಗ್ರಾಮದ ಹರಿಪ್ರಸಾದ್ (27) ಮೃತಪಟ್ಟ ಚಾಲಕ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ತಗಡೂರು ಗ್ರಾಮದಿಂದ ದೊಡ್ಡ ಕವಲಂದೆಗೆ ತೆರಳುವ ವೇಳೆ  ಚುಂಚನಹಳ್ಳಿ ಗ್ರಾಮದ ಮಾದಯ್ಯನ ಗುಡಿ ಬಳಿ ಕಾರು ನಿಯಂತ್ರಣ ತಪ್ಪಿ ಘಟನೆ ನಡೆದಿದೆ ಎನ್ನಲಾಗಿದೆ. ದೊಡ್ಡ ಕವಲಂದೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Drive – car -overturned –death- mysore