ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ತಂಡ ಸೇರಿದ ‘ಹಂಬಲ್ ಪೊಲಿಟಿಷಿಯನ್’

ಬೆಂಗಳೂರು, ಜುಲೈ 02, 2020 (www.justkannada.in): ರಕ್ಷಿತ್ ಶೆಟ್ಟಿ ಅಭಿನಯದಲ್ಲಿ ಮೂಡಿಬರುತ್ತಿರುವ 777 ಚಾರ್ಲಿ ಸಿನಿಮಾದ ಬಹುಭಾಗ ಚಿತ್ರೀಕರಣ ಪೂರ್ಣಗೊಂಡಿದೆ.

ಲಾಕ್‍ಡೌನ್ ಹಿನ್ನೆಲೆ ಶೂಟಿಂಗ್ ಸ್ಥಗಿತವಾಗಿದ್ದು, ಇದೀಗ ಚಿತ್ರೀಕರಣಕ್ಕೆ ಮತ್ತೆ ಅವಕಾಶ ನೀಡಿರುವುದರಿಂದ ಕೊನೆಯ ಹಂತದ ಚಿತ್ರೀಕರಣಕ್ಕೆ ಗಿ ಚಿತ್ರ ತಂಡ ಸಿದ್ಧತೆ ನಡೆಸಿದೆ.

ಚಾರ್ಲಿ ತಂಡಕ್ಕೆ ಮತ್ತೊಬ್ಬ ನಟ ಸೇರ್ಪಡೆಯಾಗಿರುವ ಕುರಿತು ತಿಳಿಸಿದೆ. ಹಂಬಲ್ ಪೊಲಿಟಿಷಿಯನ್ ಸಿನಿಮಾ ಖ್ಯಾತಿಯ ನಟ ಡ್ಯಾನಿಶ್ ಸೇಠ್ಚಿತ್ರಕ್ಕೆ ಸೇರ್ಪಡೆಯಾಗಿದ್ದು, ಈ ಕುರಿತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.

ಚಾರ್ಲಿ ಚಿತ್ರದ ಪೋಸ್ಟರ್‍ನಲ್ಲಿ ಡ್ಯಾನಿಶ್ ಇರುವ ಚಿತ್ರ ಹಾಕಿ ಸ್ವಾಗತಿಸಿದ್ದಾರೆ. ಡ್ಯಾನಿಶ್ ಹುಟ್ಟುಹಬ್ಬವಾದ್ದರಿಂದ ಚಿತ್ರತಂಡ ಅವರಿಗೆ ಸಪ್ರ್ರೈಸ್ ನೀಡಿದೆ.