ಗೋಲ್ಡನ್ ಸ್ಟಾರ್ ಗಣೇಶ್’ಗೆ ಹುಟ್ಟು ಹಬ್ಬದ ಸಂಭ್ರಮ

ಬೆಂಗಳೂರು, ಜುಲೈ 02, 2020 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇಂದು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಆದರೆ ಈ ಬಾರಿ ಕೊರೊನಾ ಇರುವುದರಿಂದ ಗಣೇಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.

ಗಣೇಶ್ ಕೂಡಾ ಈ ಲಾಕ್​​ಡೌನ್ ದಿನಗಳಲ್ಲಿ ಹಲವರಿಗೆ ಸಹಾಯ ಮಾಡಿದ್ಧಾರೆ. ಆದರೆ ಅದನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಗಣೇಶ್ ಅವರ ಕೆಲವು ಆಪ್ತರಿಂದ ಈ ವಿಚಾರ ಬೆಳಕಿಗೆ ಬಂದಿದೆ.

ಇನ್ನು ಹುಟ್ಟುಹಬ್ಬ ಆಚರಣೆಗಾಗಿ ಮನೆ ಬಳಿ ಅಭಿಮಾನಿಗಳು ಬರುವುದು ಬೇಡ ಎಂದು ಗಣೇಶ್ ಕೆಲವು ದಿನಗಳ ಮೊದಲೇ ಮನವಿ ಮಾಡಿದ್ದರು.