Thursday, August 13, 2026

BDA Apartments

Home Cinema ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ಸೋಂಕು

ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ಸೋಂಕು

ಬೆಂಗಳೂರು, ಜುಲೈ 02, 2020 (www.justkannada.in): ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೋನಾ ಇರುವುದು ದೃಢಪಟ್ಟಿದೆ.

ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿರುವ ನವ್ಯಾ ಸ್ವಾಮಿ ತಮಗೆ ಕೊರೋನಾ ಪಾಸಿಟಿವ್ ಆಗಿದೆ ಎಂದು ಇನ್ ಸ್ಟಾಗ್ರಾಂ ಮೂಲಕ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ನಾನು ಧೈರ್ಯವಾಗಿದ್ದು, ವೈದ್ಯರ ಸಲಹೆಯಂತೆ ಸೂಕ್ತ ಔಷಧ, ಪೋಷಕಾಂಶಯುಕ್ತ ಆಹಾರ ಸೇವಿಸುತ್ತಿದ್ದೇನೆ. ನನ್ನ ದೇಹವನ್ನು ಕೊರೋನಾ ವಿರುದ್ಧ ಹೋರಾಡಲು ಅಣಿಗೊಳಿಸಿದ್ದೇನೆ. ವಿಶ್ರಾಂತಿ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.