ಹ್ಯಾಂಗ್ ಓವರ್ ಪಬ್ ನಲ್ಲಿ ಭಾರಿ ಅಗ್ನಿ ಅವಘಡ

ಬೆಂಗಳೂರು,ನವೆಂಬರ್,16,2020(www.justkannada.in) ; ನಗರದ ಎಚ್ಎಸ್ ಆರ್ ಲೇಔಟ್ ನಲ್ಲಿರುವ ಹ್ಯಾಂಗ್ ಓವರ್ ಪಬ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.

kannada-journalist-media-fourth-estate-under-loss

ಮಧ್ಯಾಹ್ನ ಸುಮಾರು 12.25ಕ್ಕೆ ಪಬ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ್ದ 3 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

 Huge,fire,hangover,pub

key words ; Huge-fire-hangover-pub