ಡ್ರಗ್ಸ್ ಪೆಡ್ಲರ್‌ಗಳ ಬಂಧನ : 6 ಮೊಬೈಲ್ ಹಾಗೂ ಪಾಸ್‌ಪೋರ್ಟ್ ಜಪ್ತಿ

0
217

ಬೆಂಗಳೂರು,ನವೆಂಬರ್,16,2020(www.justkannada.in) : ಡ್ರಗ್ಸ್ ಮಾರಾಟದಲ್ಲಿ ನಿರತರಾಗಿದ್ದ  ಪೆಡ್ಲರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 6 ಮೊಬೈಲ್ ಹಾಗೂ ಪಾಸ್ಪೋರ್ಟ್ ಜಪ್ತಿ ಮಾಡಿದ್ದಾರೆ.

kannada-journalist-media-fourth-estate-under-lossನೈಜೀರಿಯಾದ ಮಾರ್ಕ್ ಹಾಗೂ ಹೆನ್ರಿ ಬಂಧಿತರು. ಅಕ್ಟೋಬರ್ 30ರಂದು ನೈಜೀರಿಯಾದ ಪೆಡ್ಲರ್ ಸನ್ನಿ ಎಂಬಾತನನ್ನು ಬಂಧಿಸಲಾಗಿತ್ತು. ಆತನಿಂದ ಕೊಕೇನ್ ಜಪ್ತಿ ಮಾಡಲಾಗಿತ್ತು. ಆತ ನೀಡಿದ್ದ ದೂರು ಆಧರಿಸಿ ಇದೀಗ ಮಾರ್ಕ್ ಹಾಗೂ ಹೆನ್ರಿಯನ್ನು ಸೆರೆ ಹಿಡಿಯಲಾಗಿದೆಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದ್ದಾರೆ.

ಆರೋಪಿಗಳು, ಹಲವು ವರ್ಷಗಳಿಂದ ನಗರದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. ಮಾರ್ಕ್ ಬಳಿ ಮಾತ್ರ ಪಾಸ್ಪೋರ್ಟ್ ಇದೆ. ಹೆನ್ರಿ ಬಳಿ ಇಲ್ಲ ಎಂದು ಅವರು ಹೇಳಿದ್ದಾರೆ.

key words : Detention-Two-Drugs-Peddlers-6 Mobile-Passport- foreclosure