Tuesday, September 29, 2026

BDA Apartments

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ: ಆರೋಪಿ ಅಂದರ್...
Home Crime ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ: ಆರೋಪಿ ಅಂದರ್…

ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ: ಆರೋಪಿ ಅಂದರ್…

ಹುಬ್ಬಳ್ಳಿ,ಸೆ,17,2019(www.justkannada.in):  ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಅಸಾರ ಓಣಿಯಲ್ಲಿ  ಈ ಘಟನೆ ನಡೆದಿದೆ. ಕರಣ್ ಶೆಟ್ವಾ (20) ಚಾಕು ಇರಿತದಿಂದ ಸಾವನ್ನಪ್ಪಿದ ಯುವಕ. ಕ್ಷುಲಕ ಕಾರಣಕ್ಕೆ ರಾಹುಲ್ ಎಂಬಾತ ಕರಣ್ ಶೆಟ್ಟಾಗೆ ಚಾಕುವಿನಿಂದ ಇರಿದಿದ್ದ. ತಕ್ಷಣ  ಕರಣ್ ನನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕರಣ್ ಶೆಟ್ವಾ ಮೃತಪಟ್ಟಿದ್ದಾನೆ.

ಆಸ್ಪತ್ರೆ ಎದುರು ಮೃತನ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದ್ದು ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.  ಚಾಕುವಿನಿಂದ ಇರಿದು ಹತ್ಯೆಗೈದ ಆರೋಪಿ ರಾಹುಲ್ ನನ್ನ ಪೊಲೀಸರು ಬಂಧಿಸಿದ್ದಾರೆ.

Key words: hubli- murder – young man – knife