ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಜ್ಜು: ಈ ಬಾರಿ ಮಕ್ಕಳ ಉದ್ಯನವನಕ್ಕೆ ಹೆಚ್ಚಿನ ಆದ್ಯತೆ…

ಮೈಸೂರು,ಆ,27,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ದಿನಗಣನೆ ಆರಂಭವಾಗಿದ್ದು ಈ ನಡುವೆ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೋಟಗಾರಿಕೆ ಇಲಾಖೆ ಸಜ್ಜಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಇದಕ್ಕಾಗಿ 75 ಸಾವಿರ ವಿವಿಧ ಬಗೆಯ ಅಲಂಕಾರಿಕ ಸಸ್ಯಗಳನ್ನ  ಪಾಟ್ ಗಳಲ್ಲಿ ಬೆಳೆಸಲಾಗುತ್ತಿದೆ. ಈ ಬಾರಿ ಮಕ್ಕಳ ಉದ್ಯಾನವನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇನ್ನು ತೋಟಗಾರಿಗೆ ಇಲಾಖೆ ಫಲಪುಷ್ಪ ಪ್ರದರ್ಶನ ನಡೆಯುವ ಕುಪ್ಪಣ್ಣ ಪಾರ್ಕ್ ನ್ನು ಪ್ರವಾಸಿ ತಾಣವಾಗಿಸಲು ಚಿಂತನೆ ಮಾಡಿದ್ದು  ಸಂಗೀತ ಕಾರಂಜಿಯನ್ನ ಪ್ರತಿ ವಾರಂತ್ಯದಲ್ಲಿ ವರ್ಷ ಪೂರ್ತಿ ನಡೆಸಲು ಆಲೋಚಿಸಿದೆ. ಫಲಪುಷ್ಪ ಪ್ರದರ್ಶನಕ್ಕೆ ಉದ್ಯನವನದಲ್ಲಿರುವ ಗಾಜಿನ ಮನೆ ಸುತ್ತಲು ಸುಮಾರು2 ಸಾವಿರ  ಪಾಟ್ ಗಳಿಂದ ಅಲಂಕಾರಕ್ಕೆ ಸಿದ್ದತೆ ನಡೆಸಲಾಗಿದ್ದು, ಇಲಾಖೆಯ ಕೇಂದ್ರ ಸಸ್ಯಗಾರ ಸೇರಿದಂತೆ  ಐದು ಸಸ್ಯಗಾರದಲ್ಲಿ ಪ್ರದರ್ಶನ ನಡೆಯಲಿದೆ.

ಕಳೆದ ಆರು ತಿಂಗಳಿನಿಂದಲ್ಲೆ ಗಿಡ ಬೆಳೆಸಲು ತಯಾರಿ ನಡೆಸಲಾಗಿದ್ದು ಹೂಕುಂದಗಳ ಗಿಡಬೆಳೆಸುವ ಕಾರ್ಯದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿ ತೊಡಗಿದ್ದಾರೆ. ಜಯಚಾಮರಾಜೇಂದ್ರ ಒಡೆಯರ ಜನ್ಮಶತಾಬ್ಧಿ ಹಿನ್ನಲೆ ಹೂಗಳಿಂದ ಒಡೆಯರ್ ಪ್ರತಿಮೆ ನಿರ್ಮಾಣಕ್ಕೆ ಇಲಾಖೆ ಚಿಂತನೆ ನಡೆಸಿದೆ.

Key words: Horticulture Department- Dasara- flower show-mysore