ಡಿಸಿಎಂ ಹುದ್ದೆ ಕೊಡಿ ಅಂತಾ ನಾನು ಯಾರಿಗೂ ಕೇಳಿಲ್ಲ- ಡಾ.ಜಿ. ಪರಮೇಶ್ವರ್.

ಬೆಂಗಳೂರು,ಮೇ,19,2023(www.justkannada.in):  ನಿನ್ನೆಯಷ್ಟೆ ನನಗೂ ಡಿಸಿಎಂ ಸ್ಥಾನ ಬೇಕು ಎಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಡಿಸಿಎಂ ಹುದ್ದೆ ಕೊಡಿ ಅಂತಾ ನಾನು ಯಾರಿಗೂ ಕೇಳಿಲ್ಲ ಎಂದು ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.  ಈ ಕುರಿತು ಸಿದ‍್ಧರಾಮಯ್ಯ ನಿವಾಸದ ಬಳಿ ಮಾತನಾಡಿದ ಪರಮೇಶ್ವರ್, ನಾನು ಉಪಮುಖ್ಯಮಂತ್ರಿ  ಸ್ಥಾನ ಕೊಡಿ ಅಂತ ಯಾರಿಗೂ ಕೇಳಿಲ್ಲ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಭಿನ್ನಾಭಿಪ್ರಾಯ ಶಮನವಾಗಿದೆ. ನಾನಾಗಲಿ ಇನ್ನೊಬ್ಬರಾಗಲಿ ಕೇಳುವುದೆಲ್ಲವೂ ಮುಗಿಯಿತು. ಕೇಳಿದ್ದಕ್ಕೆ ಎಲ್ಲವೂ ಅಗುತ್ತೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತದೆ  ಎಂದರು.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಅವರ ಬೇರೆ ನಿಲುವು ಸರಿಯಾಗಿದೆ. ಎಲ್ಲಾವು ಒಳ್ಳೆಯದಾಗಿ ಕಾಣಿಸುತ್ತಿದೆ. ನಾವು ಜನರಿಗೆ ಏನು ಭರವಸೆ ನೀಡಿದ್ದೇವೆ ಅದನ್ನ ಈಡೇರಿಸಬೇಕು. ಜನ ಹೇಳುವುದು ನಾವು ಹೇಳುವುದು ಮುಖ್ಯ ಅಲ್ಲ. ನಿನ್ನೆ ಸಿದ್ದರಾಮಯ್ಯರನ್ನು ವಿಶ್​​ ಮಾಡುವುದಕ್ಕೆ ಹೋಗಿದ್ದೆ ಎಂದು ತಿಳಿಸಿದರು.

Key words: DCM -post – Dr. G. Parameshwar-bangalore