Monday, September 28, 2026

BDA Apartments

Home Front Page RSS ಬಗ್ಗೆ ನಾನು ಏನೂ ಸೃಷ್ಠಿ ಮಾಡಿಲ್ಲ: ಕೋರ್ಟ್ ಆದೇಶ ಪಾಲನೆ ಮಾಡ್ತೇನೆ- ಗೃಹ ಸಚಿವ...

RSS ಬಗ್ಗೆ ನಾನು ಏನೂ ಸೃಷ್ಠಿ ಮಾಡಿಲ್ಲ: ಕೋರ್ಟ್ ಆದೇಶ ಪಾಲನೆ ಮಾಡ್ತೇನೆ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು,ಜೂನ್,30,2026 (www.justkannada.in): ಆರ್‌ಎಸ್‌ಎಸ್ ಮತ್ತು ಅದರ ಕಾರ್ಯಕರ್ತರ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮಗೆ ಕೋರ್ಟ್ ನಿಂದ ಸಮನ್ಸ್ ಬಂದಿರುವ ಕುರಿತು  ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ,  ಆರ್ ಎಸ್ ಎಸ್ ಬಗ್ಗೆ ನಾನು ಏನೂ ಸೃಷ್ಠಿ ಮಾಡಿಲ್ಲ ಜನರ ಮಾಹಿತಿ ಏನಿದೆ ಅದನ್ನ ಪುನರುಚ್ಚರಿಸಿದ್ದೇನೆ.  ಪತ್ರಿಕೆಗಳಲ್ಲಿ ಬಂದಿರೋದನ್ನೇ ನಾನು ಪ್ರಕಟಿಸಿದೆ.    ಕೋರ್ಟ್ ಆದೇಶ ಏನಿದೆ ಅದನ್ನ ಪಾಲನೆ ಮಾಡುತ್ತೇನೆ ಎಂದು ತಿಳಿಸಿದರು.

ಆರ್ ಎಸ್ ಎಸ್ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ಹ್ಯಾರಿಸ್ ನಲಪಾಡ್ ವಿರುದ್ದ  ಬೆಂಗಳೂರಿನ ಸಿದ್ದಾಪುರ ನಿವಾಸಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತ ಎ. ತೇಜಸ್ ಈ ಖಾಸಗಿ ದೂರು  ಸಲ್ಲಿಸಿದ್ದರು.RSS ಬಗ್ಗೆ ನಾನು ಏನೂ ಸೃಷ್ಠಿ ಮಾಡಿಲ್ಲ BDA JK_Adv BDA Adv

ದೂರಿನಲ್ಲಿ, 2025ರ ಆಗಸ್ಟ್ 14ರಂದು ಪ್ರಿಯಾಂಕ್ ಖರ್ಗೆ ಅವರು ತಮ್ಮ ಅಧಿಕೃತ ‘ಎಕ್ಸ್‌’ (X) ಸಾಮಾಜಿಕ ಜಾಲತಾಣ ಖಾತೆಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಗುರಿಯಾಗಿಸಿ ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ಕೋರ್ಟ್ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸಮನ್ಸ್ ನೀಡಿದೆ.ಕೋರ್ಟ್ ಆದೇಶ ಪಾಲನೆ ಮಾಡ್ತೇನೆ jk02_new jk02 new

Key words: RSS,  court orders, Home Minister, Priyank Kharge