Saturday, November 7, 2026

Dasara Wishes

Happy Dasara
Home Front Page ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದ- ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಒಂದು ತಿಂಗಳಾದ ಮೇಲೆ ಬಿವೈ ವಿಜಯೇಂದ್ರ ಜಾಗವೇ ಗ್ಯಾರಂಟಿ ಇಲ್ಲ- ಗೃಹ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಬೆಂಗಳೂರು,ಆಗಸ್ಟ್,7,2026 (www.justkannada.in): ಹೈಕಮಾಂಡ್ ಒಂದು ವೇಳೆ ಪಕ್ಷದ ಜವಾಬ್ದಾರಿ ನೀಡಿದರೇ ಸ್ವೀಕರಿಸುವೆ. ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೆಲ ಸಚಿವರನ್ನು ಬದಲಿಸಿ ಅಸಮಾಧಾನಿತರಿಗೆ ಸ್ಥಾನ ನೀಡುವ ವಿಚಾರ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂಬ ವಿವೇಚನೆ ಸಿಎಂಗೆ ಇದೆ.  ಹೈಕಮಾಂಡ್ ಜೊತೆ ಮಾತನಾಡಿ ಯಾರಿಗೆ ಜವಾಬ್ದಾರಿ ಕೊಟ್ಟರೆ  ಚೆನ್ನಾಗಿ ಕೆಲಸ ಮಾಡುತ್ತಾರೆ  ಎಂದುದು ನೋಡಿ ಜವಾಬ್ದಾರಿ ಕೊಡುತ್ತಾರೆ.  135 ಶಾಸಕರಿದ್ದೇವೆ ಮಂತ್ರಿಮಂಡಲದಲ್ಲಿ 33 ಸಚಿವರಿಗೆ ಮಾತ್ರ ಸ್ಥಾನ.  ಹೀಗಿರುವಾಗ ಎಲ್ಲ ಶಾಸಕರಿಗೂ ಪ್ರಾತಿನಿಧ್ಯ ನೀಡುವುದು ಕಷ್ಟ ಆಗುತ್ತೆ. ಎಲ್ಲರೂ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದರು.

ಅಕಸ್ಮಾತ್ ಹೈಕಮಾಂಡ್ ಗೆ ಅನಿಸಿ ಪಕ್ಷದ ಕೆಲಸ ಮಾಡಿ ಅಂದ್ರೆ ನಾನು ರಾಜೀನಾಮೆ ನೀಡಲು ಸಿದ್ದನಿದ್ದೇನೆ. ಹೈಕಮಾಂಡ್ ನಾಳೆ ಪಕ್ಷದ ಜವಾಬ್ದಾರಿ ನೀಡಿದರೇ ಸ್ವೀಕರಿಸುವೆ. ಇದು ಎಲ್ಲರಿಗೂ ಅನ್ವಯಾಗುತ್ತೆ, ಅಸಮಾಧಾನ ಪಡುವಂಥದ್ದೇನಿಲ್ಲ ಎಂದರು.

Key words:  ready, resign, party, work, Home Minister, Priyank Kharge