ಹೈಕಮಾಂಡ್ ಬಳಿ ತುಮಕೂರು ಟಿಕೆಟ್ ಕೇಳಿದ್ದೇನೆ-ಮಾಜಿ ಸಚಿವ ವಿ.ಸೋಮಣ್ಣ.

ಬೆಂಗಳೂರು,ಫೆಬ್ರವರಿ,17,2024(www.justkannada.in): ತುಮಕೂರಿಗೂ ನನಗೂ ಅವಿನಾಭಾವ ಸಂಬಂಧವಿದೆ. ಹೈಕಮಾಂಡ್ ಬಳಿ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ವಿ.ಸೋಮಣ್ಣ, ಹೈಕಮಾಂಡ್ ಬಳಿ ತುಮಕೂರು ಟಿಕೆಟ್ ಕೇಳಿದ್ದೇನೆ. ಗುರುತಿಸಿ ನನಗೆ ಟಿಕೆಟ್ ಕೊಟ್ಟರೇ ಜನರ ಬಳಿ ಹೋಗುತ್ತೇನೆ.  ನಾನು 365 ದಿನವೂ ಚುನಾವಣೆ ಮಾಡುವುದು ಗೆದ್ದಾಗಲೂ ಸುಮ್ಮನೆ ಕೂತಿಲ್ಲ ಇದು ನನ್ನ ದೈನಂದಿನ ಕೆಲಸ ಚುನಾವಣೆಯಲ್ಲಿ ಸೋತಿದ್ದಕ್ಕೆ ಸ್ವಲ್ಪ ಸೋಮಾರಿಯಾಗಿದ್ದೇನೆ. ಎಂದರು.

ಮೋದಿ ಪ್ರಧಾನಿ ಅಗ್ತಾರೆ ಅಂದರೆ ನಮ್ಮ ಅಳಿಲು ಸೇವೆ ಬೇಕಲ್ಲ. ನನಗೆ ಬೆಂಗಳೂರು ಹೇಗೋ ತುಮಕೂರು ಕೂಡ ಹಾಗೆ ಇದೆ.  ನನಗೂ ತುಮಕೂರುಗೂ ಅವಿನಾಭಾವ ಸಂಬಂಧವಿದೆ ಎಂದು ವಿ.ಸೋಮಣ್ಣ ತಿಳಿಸಿದರು.

Key words: high command –Tumkur-ticket-former minister -V. Somanna.