ಬಾಲರಾಮನಿಗೆ ಭಕ್ತರ ಒತ್ತಡ ತಪ್ಪಿಸಲು ಪ್ರತಿದಿನ ಮಧ್ಯಾಹ್ನ ೧ ಗಂಟೆ ಮಂದಿರ ಬಂದ್‌ ..!

 

ಅಯೋಧ್ಯೆ  ಫೆ ̤ ೧೬, ೨೦೨೪ : ( justkannada ̤ in news ) ಅಯೋಧ್ಯೆಯ ರಾಮಮಂದಿರ ಶುಕ್ರವಾರದಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆ ಮುಚ್ಚಲಾಗುವುದು ಎಂದು ರಾಮ ಮಂದಿರದ ಮುಖ್ಯ ಅರ್ಚಕ ತಿಳಿಸಿದ್ದಾರೆ.

ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಭಕ್ತರ ದಂಡು ಹರಿದು ಬರುತ್ತಿರುವ ಕಾರಣ, ದೇವಸ್ಥಾನದ ಟ್ರಸ್ಟ್ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ದರ್ಶನದ ಸಮಯವನ್ನು ಹೆಚ್ಚಿಸಿದೆ.

ಜನವರಿ 23 ರಿಂದ,  ಬೆಳಿಗ್ಗೆ 4 ಗಂಟೆಗೆ  ಧಾರ್ಮಿಕ ಕ್ರಿಯೆಗಳಿಗಾಗಿ ನಿಗಧಿ ಪಡಿಸಲಾಗಿದೆ. ಬಳಿಕ ಭಕ್ತಾದಿಗಳಿಗೆ ‘ದರ್ಶನ’ದ ಅನುಮತಿ ನೀಡಲಾಗುತ್ತದೆ. ಇದು ರಾತ್ರಿ 10 ರವರೆಗೆ ಮುಂದುವರಿಯುತ್ತದೆ.

“ಶ್ರೀ ರಾಮ್ ಲಲ್ಲಾ ಐದು ವರ್ಷದ ಮಗುವಾಗಿದ್ದು, ಇಷ್ಟು ಗಂಟೆಗಳ ಕಾಲ ಎಚ್ಚರವಾಗಿರುವ ಒತ್ತಡವನ್ನು ಹೊಂದಲು ಸಾಧ್ಯವಿಲ್ಲ. ಆದ್ದರಿಂದ ಬಾಲ ದೇವರಿಗೆ ಸ್ವಲ್ಪ ವಿಶ್ರಾಂತಿ ನೀಡಲು, ದೇವಾಲಯದ ಬಾಗಿಲುಗಳನ್ನು ಮುಚ್ಚಲು ಟ್ರಸ್ಟ್ ನಿರ್ಧರಿಸಿದೆ.

ಮಧ್ಯಾಹ್ನ 12:30 ರಿಂದ 1:30 ರವರೆಗೆ, ದೇವರು ವಿಶ್ರಾಂತಿ ಪಡೆಯಲಿ ಎಂದು ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ತಿಳಿಸಿದ್ದಾರೆ.

ಕೃಪೆ : ಪಿಟಿಐ

 

Key words : Ayodhya’s Ram temple ̲ remain closed ̲ for an hour ̲ chief priest ̲  Ram temple ̤

Summary :

“Shri Ram Lalla is a five-year-old child and he cannot take the stress of staying awake for such long hours. So to give some rest to the child deity, the trust has decided that the doors of the temple will remain closed from 12:30 pm to 1:30 pm, so that the deity may take rest,” Acharya Satyendra Das, the chief priest, told PTI