Saturday, September 19, 2026

BDA Apartments

ಬಿಜೆಪಿಗೆ ಜವಾಬ್ದಾರಿ, ಜನಪರ ಕಾಳಜಿ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ BDA JK_Ad...
Home Front Page ಬಿಜೆಪಿಗೆ ಜವಾಬ್ದಾರಿ, ಜನಪರ ಕಾಳಜಿ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ.

ಬಿಜೆಪಿಗೆ ಜವಾಬ್ದಾರಿ, ಜನಪರ ಕಾಳಜಿ ಇಲ್ಲ- ಸಚಿವ ಹೆಚ್.ಸಿ ಮಹದೇವಪ್ಪ ಕಿಡಿ.

ಬೆಂಗಳೂರು,ಫೆಬ್ರವರಿ,17,2024(www.justkannada.in):  ನಿನ್ನೆ ಸಿಎಂ ಸಿದ್ದರಾಮಯ್ಯ ಮಂಡಿಸಿದ 2024-25ನೇ ಸಾಲಿನ ರಾಜ್ಯ ಬಜೆಟ್ ಬಗ್ಗೆ ಟೀಕಿಸಿದ್ದ ಬಿಜೆಪಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್  ಮಾಡಿರುವ ಹೆಚ್.ಸಿ ಮಹದೇವಪ್ಪ,  ಬಜೆಟ್ ಕೇಳಿಸಿಕೊಂಡು ಟೀಕೆ ಮಾಡುವವರನ್ನು ನಾನು ನೋಡಿದ್ದೇನೆ. ಆದರೆ ಬಿಜೆಪಿಯವರು ಬಜೆಟ್ ಕೇಳದೆ ಟೀಕೆ ಮಾಡುತ್ತಿದ್ದಾರೆ ಬಿಜೆಪಿಗರಿಗೆ ನಿಜಕ್ಕೂ ಆಡಳಿತಾತ್ಮಕ ಜ್ಞಾನವಿಲ್ಲ. ಮಂದಿರ ಮಸೀದಿ ಎಂಬುದು ಬಿಟ್ಟರೆ ಜನಪರವಾಗಿ ಚಿಂತಿಸಿದ್ದು ಕಾಣಲಿಲ್ಲ ಎಂದು ಕುಟುಕಿದ್ದಾರೆ.ಬಿಜೆಪಿಗೆ ಜವಾಬ್ದಾರಿ hc mahadevappa

ಏನಿಲ್ಲಾ ಏನಿಲ್ಲಾ… ಬಜೆಟ್ ಅಧಿವೇಶನವನ್ನು ತೊರೆದು ಹೋದ ವಿರೋಧ ಪಕ್ಷ  ಬಿಜೆಪಿಯವರಿಗೆ ಕನಿಷ್ಟ ಜವಾಬ್ದಾರಿ ಇಲ್ಲ. ಅವರಿಗೆ ಜನಪರ ಕಾಳಜಿ ಇಲ್ಲ. ಅವರಿಗೆ ಪ್ರಜಾಪ್ರಭುತ್ವ ಗೊತ್ತಿಲ್ಲ. ಅವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ ಎಂದು ಹೆಚ್.ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ.

Key words: BJP -no responsibility-concern – people- Minister- HC Mahadevappa