ನನಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ಬಹಳ ಷಡ್ಯಂತ್ರ ಇದೆ- ಮಾಜಿ ಸಚಿವ ಹೆಚ್.ವಿಶ್ವನಾಥ್…

ಬೆಂಗಳೂರು,ಜೂ,18,2020(www.justkannada.in):  ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬೇಸರ ವ್ಯಕ್ತಪಡಿಸಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್ ನನಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ಬಹಳ ಷಡ್ಯಂತ್ರ ಇದೆ. ಮುಂದಿನ ದಿನಗಳಲ್ಲಿ ವಸ್ತುಸ್ಥಿತಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ.hesitancy-mlc-ticket-former-minister-h-vishwanath

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್,  ಮತ್ತೊಂದು ಅಧಿಕಾರಕ್ಕಾಗಿ ಇದನ್ನ ತ್ಯಾಗ ಮಾಡಿದ್ದೇನೆ. ಬಿ.ಎಸ್ ಯಡಿಯೂರಪ್ಪ ನಮ್ಮ ನಾಯಕರು. ಕೋರ್ ಕಮಿಟಿಯಲ್ಲಿ ನನ್ನ ಹೆಸರು ಇತ್ತು. ಆದರೆ ದೆಹಲಿಯಲ್ಲಿ ಏನಾಯಿತು ಎಂಬುದು ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದ ನಾಯಕರಿಗೆ ನನ್ನನ್ನ ಕಂಡರೇ ಅಸೂಹೆ. ಟಿಕೆಟ್ ಕೈತಪ್ಪಿದ ಹಿಂದೆ ಬಹಳ ಷಡ್ಯಂತ್ರ ಇದೆ.  ಏನಾಯ್ತು ಷಡ್ಯಂತ್ರ ಹೇಗಾಯಿತು ಎಂಬುದನ್ನ ಮುಂದಿನ ದಿನಗಳಲ್ಲಿ  ತಿಳಿಸುತ್ತೇನೆ ಎಂದು ಹೇಳಿದರು.

ಇನ್ನು ಪರಿಷತ್ ಟಿಕೆಟ್ ತಪ್ಪಿದ್ದರಿಂದ ಹತಾಶನಾಗಿಲ್ಲ. ಈಗಲೂ ಬಿಎಸ್ ವೈ ಮೇಲೆ ಭರವಸೆ ಇದೆ. ವಿಧಾನಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಿಗೆ ಶುಭಹಾರೈಸುತ್ತೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

Key words:  hesitancy –MLC- ticket-Former Minister -H.Vishwanath.