ಬೆಂಗಳೂರಿನಲ್ಲಿ ನಾಲ್ವರು ಗರ್ಭಿಣಿಯರಿಗೆ ಕೊರೋನಾ ಸೋಂಕು ದೃಢ…

ಬೆಂಗಳೂರು,ಜೂ,18,2020(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು ಇಂದು ನಾಲ್ವರು ಗರ್ಭಿಣಿಯರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ.

ಚಾಮರಾಜಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಇಂದು ವರದಿ ಬಂದಿದ್ದು, ಕೊರೋನಾ ಟೆಸ್ಟ್ ವರದಿಯಲ್ಲಿ ನಾಲ್ವರು ಗರ್ಭಿಣಿಯರಿಗೂ ಕೊರೊನಾ ಪಾಸಿಟೀವ್ ಇರುವುದು ಕಂಡು ಬಂದಿದೆ.coronavirus-infection-four-pregnant-women-bangalore

ಇನ್ನು ಕೊರೋನಾಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ.  ಬೆಂಗಳೂರಿನ ಚಿಕ್ಕಪೇಟೆಯ ಜೈನ್ ಟೆಂಪಲ್ ದೇವಾಲಯದ 55 ವರ್ಷದ ಅರ್ಚಕರೊಬ್ಬರು  ಸಾವನ್ನಪ್ಪಿದ್ದು ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಕಳೆದ ಎರಡು ದಿನಗಳ ಹಿಂದೆ ಜ್ವರ ಬಂದ ಕಾರಣ ಅರ್ಚಕ ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Key words: Coronavirus- infection – four- pregnant -women – Bangalore