Monday, August 17, 2026

BDA Apartments

Home Front Page ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆ ಹಿಂಪಡೆದ ವಿಚಾರ: ಟ್ವಿಟ್ಟರ್ ನಲ್ಲಿ ಡಿ.ಕೆ ಶಿವಕುಮಾರ್...

ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆ ಹಿಂಪಡೆದ ವಿಚಾರ: ಟ್ವಿಟ್ಟರ್ ನಲ್ಲಿ ಡಿ.ಕೆ ಶಿವಕುಮಾರ್ ಟೀಕಿಸಿದ್ದು ಹೀಗೆ…

ಬೆಂಗಳೂರು,ಅಕ್ಟೋಬರ್,12,2020(www.justkannada.in): ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಖಾತೆಯನ್ನ ಹಿಂಪಡೆದು ಸಚಿವ ಸುಧಾಕರ್ ಅವರಿಗೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.jk-logo-justkannada-logo

ಈ ಕುರಿತು ಟ್ವೀಟ್ ಮಾಡಿರುವ ಡಿ.ಕೆ ಶಿವಕುಮಾರ್, ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಪುನರಚನೆ ಮಾಡಿದ್ದಾರೆ. ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಖಾತೆ ಮರು ಹಂಚಿಕೆಯಿಂದ ತಿಳಿಯುತ್ತದೆ ಸರ್ಕಾರದ ವೈಪಲ್ಯ. ಆರೋಗ್ಯ ಖಾತೆ ಬದಲಾವಣೆಯಿಂದ ವಾಸ್ತವ ತಿಳಿಯುತ್ತದೆ ಎಂದು ಕುಟುಕಿದ್ದಾರೆ.

ಆರೋಗ್ಯ ಸಚಿವರು ಮತ್ತು ಸರ್ಕಾರದ ವೈಪಲ್ಯದಿಂದ ಹಲವರು ಜೀವ ಕಳೆದುಕೊಂಡು ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾನು ಮಾಡಿದ್ಧ ಆರೋಪ ಸತ್ಯ ಎಂದು ಇದರಿಂದ ತಿಳಿಯುತ್ತದೆ ಎಂದು ಡಿ.ಕೆ ಶಿವಕುಮಾರ್  ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.health-department-minister-sriramulu-kpcc-president-dk-shivakumar-criticize

ಸಚಿವ ಶ್ರೀರಾಮುಲು ಬಳಿ ಇದ್ಧ ಆರೋಗ್ಯ ಖಾತೆಯನ್ನ  ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಗೆ ಹೆಚ್ಚುವರಿಯಾಗಿ ಹಾಗೂ ಸಮಾಜ ಕಲ್ಯಾಣ ಇಲಾಖೆಯನ್ನ ಸಚಿವ ಶ್ರೀರಾಮುಲುಗೆ ಹಂಚಿಕೆ ಮಾಡಿ ಸಿಎಂ ಬಿಎಸ್ ವೈ ಆದೇಶಿಸಿದ್ದರು.

key words: Health department-Minister- sriramulu-kpcc president- DK Shivakumar-criticize